Bangalore, ಮೇ 5 -- ಬೆಂಗಳೂರು ದಕ್ಷಿಣದ ಕಲ್ಯಾಣ ನಗರದಲ್ಲಿರುವ ಮಾತಾ ನ್ಯಾಷನಲ್ ಹೈಸ್ಕೂಲ್ ವಿದ್ಯಾರ್ಥಿನಿ ನಮಿತಾ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ಔಟ್ ಆಫ್ ಔಟ್ ಅಂಕ ಪಡೆಯಲು ಈಕೆಯ ಓದಿನ ಕ್ರಮ ಹೇಗಿತ್ತು? ಈಕೆಯ ಯಶಸ್ಸಿನ ಗುಟ್ಟೇನು? ಇತ್ಯಾದಿ ಹಲವು ವಿಚಾರಗಳನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸಂದರ್ಶನದಲ್ಲಿ ತಿಳಿಸಿದ್ದಾರೆ.
"ಪ್ರತಿನಿತ್ಯ ಟೈಂಟೇಬಲ್ ಹಾಕಿಕೊಂಡು ಓದುವ ಅಭ್ಯಾಸ ಹೊಂದಿಲ್ಲ. ಆದರೆ, ಪ್ರತಿದಿನ ಎರಡು ಗಂಟೆ ಓದುವ ಅಭ್ಯಾಸವನ್ನು ಹತ್ತನೇ ತರಗತಿ ಆರಂಭದಿಂದಲೂ ಬೆಳೆಸಿಕೊಂಡು ಬಂದಿದ್ದೇನೆ. ಯಾವಾಗ ಸಮಯ ಸಿಗುತ್ತದೆಯೋ ಅವಾಗ ಓದುತ್ತಿದ್ದೆ. ದಿನ ಒಂದರಿಂದ ನಾನು ಪ್ರಿಪೇರ್ ಆಗುತ್ತಾ ಬಂದಿರುವುದಕ್ಕೆ ನನಗೆ ಪರೀಕ್ಷೆ ಸಮಯದಲ್ಲಿ ಯಾವುದೇ ಹೊರೆ, ಬರ್ಡನ್ ಆಗಲಿಲ್ಲ" ಎಂದು ನಮಿತಾ ಹೇಳಿದ್ದಾರೆ.
"ನಾನು ಎಲ್ಲಾ ವಿಷಯಗಳ ಎಲ್ಲಾ ಕಾನ್ಸೆಪ್ಟ್‌ಗಳನ್ನು ಅರ್ಥಮಾಡಿಕೊಂಡು ಓದುತ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.