ಭಾರತ, ಮಾರ್ಚ್ 23 -- ಐಪಿಎಲ್ 2025ರ ಮೊದಲ ಶತಕ ಇಶಾನ್ ಕಿಶನ್ ಬ್ಯಾಟ್‌ನಿಂದ ಸಿಡಿದಿದೆ. ಸನ್‌ರೈಸರ್ಸ್ ಹೈದರಾಬಾದ್ ಪರ ಪದಾರ್ಪಣೆ ಪಂದ್ಯದಲ್ಲೇ ಅಬ್ಬರಿಸಿದ ಕಿಶನ್, ಟೀಕಾಕಾರರ ಬಾಯಿಮುಚ್ಚಿಸಿದ್ದಾರೆ. ಅಷ್ಟೇ ಅಲ್ಲ, ಟೀಮ್ ಇಂಡಿಯಾಗೆ ಆಯ್ಕೆ ಮಾಡದ ಬಿಸಿಸಿಐ ಆಯ್ಕೆದಾರರಿಗೆ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ಕಿಶನ್, ಚೊಚ್ಚಲ ಐಪಿಎಲ್ ಶತಕ ಬಾರಿಸಿದ್ದಾರೆ. ಅದು ಕೂಡಾ ಎಸ್‌ಆರ್‌ಎಚ್ ತಂಡಕ್ಕೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿ.
ಕೇವಲ 45 ಎಸೆತಗಳಲ್ಲಿ ಶತಕ ಬಾರಿಸಿದ ಇಶನ್, ಅಂತಿಮವಾಗಿ 47 ಎಸೆತಗಳಲ್ಲಿ 11 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ ಸಹಿತ 106 ರನ್ ಗಳಿಸಿ ಅಜೇಯರಾಗಿ ಉಳಿದರು.
(ಸುದ್ದಿ ಅಪ್ಡೇಟ್ ಆಗುತ್ತಿದೆ)
Published by HT Digital Content Services with permission from HT Kannada....
Click here to read full article from source
To read the full article or to get the complete feed from this publication, please
Contact Us.