ಬೆಂಗಳೂರು, ಮೇ 5 -- ಇಂಡಿಯನ್ ಪ್ರೀಮಿಯರ್ ಲೀಗ್‌ 18ನೇ ಆವೃತ್ತಿಯ 55ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (Sunrisers Hyderabad vs Delhi Capitals) ತಂಡಗಳು ಎದುರಾಗಲಿವೆ. ಮೇ 5ರ ಸೋಮವಾರ, ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ತವರು ನೆಲದಲ್ಲಿ ಗೆದ್ದು ಪ್ಲೇ ಆಫ್‌ ಕನಸನ್ನು ಜೀವಂತವಾಗಿಡುವ ತವಕದಲ್ಲಿ ಎಸ್‌ಆರ್‌ಎಚ್‌ ಕಣಕ್ಕಿಳಿಯಲಿದೆ. ಅತ್ತ ತವರು ಮೈದಾನದಲ್ಲಿನ ಸೋಲಿನ ನೋವನ್ನು ಮರೆತು ಆಡಲು ಅಕ್ಷರ್‌ ಪಟೇಲ್‌ ನೇತೃತ್ವದ ಕ್ಯಾಪಿಟಲ್ಸ್‌ ಸಜ್ಜಾಗಿದೆ.

ಡೆಲ್ಲಿ ತಂಡವು ಕೊನೆಯ ಎರಡು ಪಂದ್ಯಗಳಲ್ಲಿ ಸತತ ಸೋಲು ಕಂಡಿದ್ದು, ಮುಂದೆ ಗೆಲ್ಲಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದೆ. ಅತ್ತ ಪ್ಯಾಟ್ ಕಮಿನ್ಸ್ ನೇತೃತ್ವದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು, ಡೆಲ್ಲಿ ವಿರುದ್ಧ ಸೋತರೆ ಈ ಬಾರಿಯ ಐಪಿಎಲ್‌ನ ಪ್ಲೇಆಫ್‌ ರೇಸ್‌ನಿಂದ ಹೊರಬೀಳಲಿದೆ. ತಂಡದಲ್ಲಿ ಪ್ರಬಲ ಆಟಗಾರರ ದಂಡೇ ಇದ್ದರೂ, ಗೆಲ್ಲಲು ಪರದಾಡುತ್ತಿದೆ. ತನ್ನ ನೈಜ ಸಾಮರ್ಥ್ಯಕ್ಕನುಗುಣ...