ಭಾರತ, ಮೇ 24 -- ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲ್ಲಬೇಕಿದ್ದ ಮಹತ್ವದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಗ್ಗರಿಸಿದೆ. ಬರೋಬ್ಬರಿ 42 ರನ್ಗಳ ಅಂತರದಿಂದ ಸೋತ ಆರ್ಸಿಬಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿಯಿತು.
ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡಿರುವ ಆರ್ಸಿಬಿ ಈಗ ಲೀಗ್ ಹಂತದಲ್ಲಿ ಅಗ್ರ-2ರೊಳಗೆ ಮುಕ್ತಾಯಗೊಳಿಸಲು ಎಸ್ಆರ್ಹೆಚ್ ವಿರುದ್ಧದ ಸೋಲು ಕೊಂಚ ಅಡ್ಡಿಪಡಿಸಿತು. ಸೋಲಿನ ಹೊರತಾಗಿಯೂ ಆರ್ಸಿಬಿ ಇನ್ನೂ ಅಗ್ರ-2ರಲ್ಲಿ ಸ್ಥಾನ ಪಡೆಯಲು ಅವಕಾಶ ಇದೆ. ಅದು ಹೇಗೆ ಎಂದು ಮುಂದೆ ತಿಳಿಯೋಣ.
ಆರ್ಸಿಬಿ ಆಡಿರುವ 13 ಪಂದ್ಯಗಳಲ್ಲಿ 8 ಗೆಲುವು, 4 ಸೋಲಿನೊಂದಿಗೆ 17 ಅಂಕ ಪಡೆದಿದೆ. 1 ಪಂದ್ಯ ರದ್ದಾಗಿದೆ. ಇನ್ನೊಂದು ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿರುವ ಆರ್ಸಿಬಿ, ಗೆದ್ದರೆ 19 ಅಂಕದೊಂದಿಗೆ ಅಗ್ರ-2ರೊಳಗೆ ಸ್ಥಾನ ಪಡೆಯಬಹುದು.
ಅಗ್ರ-2 ತಂಡಗಳಲ್ಲಿ ಒಂದಾಗಿ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಉತ್ತಮ ಅವಕಾಶ ಹೊಂದಿರುವ ಆರ್ಸಿಬಿ ತಂಡ, ಅಂಕಪ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.