Bengaluru, ಮೇ 2 -- ಎಸ್ಎಸ್ಎಲ್‌ಸಿ ಮರು ಪರೀಕ್ಷೆಗಳ ದಿನಾಂಕವನ್ನು ಘೋಷಣೆ ಮಾಡಲಾಗಿದೆ. 26-05-2025 ರಿಂದ 02-06-2026 ರವರಿಗೆ ಮರು ಪರೀಕ್ಷೆ-2 ನಡೆಯಲಿದೆ. 23-06-2025 ರಿಂದ 0-06-2025 ವರೆಗೆ ಮರು ಪರೀಕ್ಷೆ-3 ನಡೆಯಲಿದೆ. ಮರು ಪರೀಕ್ಷೆಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಎಸ್ಎಸ್ಎಲ್‌ಸಿ ಉತ್ತರ ಪತ್ರಿಕೆಗಳ ಮರು ಎಣಿಕೆ ಮತ್ತು ಮರು ಮೌಲ್ಯಮಾಲನಕ್ಕೆ ಆನ್ ಲೈನ್ ಮೂಲಕ ಮೇ 4ರ ಭಾನುವಾರದಿಂದ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಮೇ 11ರ ಭಾನುವಾರ ಕೊನೆಯ ದಿನವಾಗಿರುತ್ತದೆ.

ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಅಂಕಗಳ ಬಗ್ಗೆ ಅಕ್ಷೇಪಗಳಿದ್ದರೆ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಗಳನ್ನು ಪಡೆಯಲು ಆನ್ ಲೈನ್ ಮೂಲಕ ಇಂದಿನಿಂದಲೇ (ಮೇ 2, ಶುಕ್ರವಾರ) ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಮೇ 7 ರ ಬುಧವಾರ ಕೊನೆಯ ದಿನವಾಗಿದೆ.

2025ರ ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ಉಡುಪಿ (ಶೇಕಡಾ 89.96) ಎರಡನೇ ಸ್ಥಾನ ಪಡೆದರೆ, ಉತ್ತರ ಕನ್ನಡ...