Vijayapura, ಮೇ 5 -- ವಿಜಯಪುರ: ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಗೆ ಟಾಪರ್‌ ಆಗಬಹುದು ಎಂದುಕೊಂಡಿದ್ದೆ. ಆದರೆ ವಿಜಯಪುರ ಜಿಲ್ಲೆಯಲ್ಲದೇ ಕರ್ನಾಟಕ ರಾಜ್ಯಕ್ಕೂ ಟಾಪರ್‌ ಆಗುತ್ತೇನೆ ಎಂದುಕೊಂಡಿರಲಿಲ್ಲ. ನಾಲ್ಕೈದು ಅಂಕ ಕಡಿಮೆ ಬರಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ಫಲಿತಾಂಶ ಬಂದ ದಿನ ಟಾಪರ್‌ ಪಟ್ಟಿಯಲ್ಲಿ ನನ್ನ ಹೆಸರೇ ಮೊದಲು ಇರುವುದು ನಿಜಕ್ಕೂ ನಂಬಲಾಗಲಿಲ್ಲ. ಪಟ್ಟಿಯಲ್ಲಿ ಹೆಸರು ಕಂಡು ಖುಷಿಯಾಯಿತು. ಯೋಜನೆ ಮಾಡಿಕೊಂಡು ಓದಿದರೆ, ಸಮಯದ ಲೆಕ್ಕಾಚಾರ ಹಾಕದರೆ ಶ್ರಮ ಹಾಕಿದರೆ ಯಾವುದಲ್ಲಾದರೂ ಯಶಸ್ಸು ಖಂಡಿತ ಎನ್ನುವುದು ನನ್ನ ಅರಿವಿಗೆ ಬಂತು. ಪರಿಶ್ರಮ ಹಾಕಿ ಓದಿದ್ದು ನಿಜಕ್ಕೂ ಸಾರ್ಥಕ ಎನ್ನಿಸಿತು. ನಿಗದಿತ ಸಮಯದಲ್ಲಿ ಓದು, ವಾರದಲ್ಲಿ ಒಂದು ಬಿಡುವಿನ ದಿನದಲ್ಲಿ ಕ್ರಿಕೆಟ್‌ ಆಟ, ಯಶ್‌ ಅವರ ಕೆಜಿಎಫ್‌ ಚಿತ್ರ ನನ್ನ ಒತ್ತಡ ನಿವಾರಣೆ ಮಾಡಿತು. ಮುಂದೆ ಐಐಟಿಯಲ್ಲಿ ಶಿಕ್ಷಣ ಪಡೆಯುವ ಹಂಬಲ ಹೊಂದಿದ್ದೇನೆ.ಅದಕ್ಕೂ ತಯಾರಿ ಮಾಡಿ ಸಾಧಿಸಿಯೇ ತೀರುತ್ತೇನೆ.

ಇದು ಈ ಬಾರಿಯ ಎಸ್ಎಸ್ಎಲ್‌ಸಿ ಪರೀಕ್ಷೆಯಲ...