ಭಾರತ, ಏಪ್ರಿಲ್ 23 -- ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು, ದೇಶ ಮಾತ್ರವಲ್ಲದೆ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಇದರ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡಾ ಐಪಿಎಲ್‌ ಸಂಬಂಧ ಕೆಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಮಂಗಳವಾರ (ಏ.22) ಮಧ್ಯಾಹ್ನ ಪ್ರವಾಸಿಗರು ತುಂಬಿದ್ದ ಸ್ಥಳದಲ್ಲಿ ಉಗ್ರರು ಗುಂಡು ಹಾರಿಸಿದ್ದು, ಕನಿಷ್ಠ 26 ಜನರು ಸಾವನ್ನಪ್ಪಿದ್ದಾರೆ. 2019ರ ಪುಲ್ವಾಮಾ ದಾಳಿಯ ನಂತರ ಕಾಶ್ಮೀರ ಕಣಿವೆಯಲ್ಲಿ ನಡೆದ ಭೀಕರ ದಾಳಿ ಇದಾಗಿದೆ. ಇದು ದೇಶವನ್ನೇ ದುಃಖಕ್ಕೆ ತಳ್ಳಿದೆ.

ದುರ್ಘಟನೆ ಬೆನ್ನಲ್ಲೇ, ಇಂದು (ಬುಧವಾರ, ಏಪ್ರಿಲ್ 23) ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಪಂದ್ಯವು ಹೆಚ್ಚು ಸಂಭ್ರಮಾಚರಣೆ ಇಲ್ಲದೆ ನಡೆಯಲಿದೆ.

ಮಾರಣಾಂತಿಕ ಉಗ್ರ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸುವ ಸಲುವಾಗಿ, ಪಂದ್ಯ ಸಮಯದಲ್ಲಿ ಪಟಾಕಿ ಸಿಡಿಸದಿರಲು ಬಿ...