ಭಾರತ, ಮಾರ್ಚ್ 26 -- ಬೆಂಗಳೂರು: ಯುಗಾದಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದ್ದು ದಿನದಿಂದ ದಿನಕ್ಕೆ ತೆಂಗಿನಕಾಯಿ ಬೆಲೆ ಏರುತ್ತಲೇ ಇದೆ. ಇದಕ್ಕೆ ಪೃಯಾಯವಾಗಿ ಎಳನೀರಿನ ಬೆಲೆಯೂ ಏರುತ್ತಲೇ ಇದೆ. ಅಡುಗೆಗೆ ಎಂತಹುದೋ ಒಂದು ತೆಂಗಿನಕಾಯಿ ಬಳಸಿ ಅಡುಗೆ ಮಾಡಬಹುದು. ಆದರೆ ಒಬ್ಬಟ್ಟು ಮಾಡಲು ಚೆನ್ನಾಗಿ ಬಲಿತ, ದಪ್ಪನೆಯ ತೆಂಗಿನಕಾಯಿಯೇ ಆಗಬೇಕು. ಆಗ ಮಾತ್ರ ಒಬ್ಬಟ್ಟು ರುಚಿಕಟ್ಟಾಗಿ ಬರುತ್ತದೆ. ಹೀಗಾಗಿ ತೆಂಗಿನಕಾಯಿ ಬೆಲೆ ಗಗನಮುಖಿಯಾಗುತ್ತೇ ಇದೆ. ಎಳನೀರಿಗೆ ಬೇಡಿಕೆ ಹೆಚ್ಚಿರುವುದು ಮೊದಲನೆಯ ಕಾರಣವಾದರೆ ಹಬ್ಬದ ನೆಪದಲ್ಲಿ ಬೆಲೆ ಏರುತ್ತಿರುವುದು ಎರಡನೆಯ ಕಾರಣವಾಗಿದೆ.

ಮತ್ತೊಂದು ಕಡೆ ಮದುವೆ, ನಾಮಕರಣ ಮೊದಲಾದ ಶುಭ ಸಮಾರಂಭಗಳು ಆರಂಭವಾಗಿದ್ದು, ಬೆಲೆ ಏರಿಕೆಗೆ ಕೊಡುಗೆ ನೀಡಿದೆ. ಇನ್ನು ತೆಂಗಿನಕಾಯಿ ಬೆಲೆ ನೋಡುವುದಾದರೆ ಅಡುಗೆಗೆ ಬಳಸುವ ಚೆನ್ನಾಗಿ ಬಲಿತ ತೆಂಗಿನಕಾಯಿ ಒಂದಕ್ಕೆ 60-70 ರೂಪಾಯಿಗೆ ಮಾರಾಟವಾಗುತ್ತಿದೆ. ಎಳನೀರಿನ ಬೆಲೆಯೂ ಇದೇ ಬೆಲೆಗೆ ಮಾರಾಟವಾಗುತ್ತಿದೆ. ಆಸ್ಪತ್ರೆಗಳ ಬಳಿ ಎಳನೀರು 70-80 ರೂ. ಗಳಿಗೆ ಮ...