ಭಾರತ, ಮಾರ್ಚ್ 17 -- ಬೆಂಗಳೂರು: ಒಂದು ಕಡೆ ಟೊಮೆಟೊ ಬೆಲೆ ಪಾತಾಳ ಕಂಡಿದ್ದರೆ ಮತ್ತೊಂದು ಅಡುಗೆಗೆ ಅನಿವಾರ್ಯವಾದ ತೆಂಗಿನಕಾಯಿ ಬೆಲೆ ಗಗನಮುಖಿಯಾಗಿದೆ. 15-20 ದಿನಗಳಿಂದ ಟೊಮೆಟೊ ಬೆಲೆ ಕುಸಿಯುವ ಜೊತೆ ತರಕಾರಿ ಬೆಲೆಯೂ ಕಡಿಮೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಆದರೆ ತೆಂಗಿನಕಾಯಿ ಬೆಲೆ ಕಣ್ಣೀರು ತರಿಸುತ್ತಿದೆ. ಇದೇ ಕಾರಣಕ್ಕೆ ಮದುವೆ, ನಾಮಕರಣ ಮೊದಲಾದ ಶುಭ ಸಮಾರಂಭಗಳಲ್ಲಿ ತೆಂಗಿನಕಾಯಿ ಕೊಡುವುದನ್ನು ನಿಲ್ಲಿಸಿದ್ದಾರೆ. ಆದರೂ ಕೆಲವರು ಪ್ರತಿಷ್ಠೆಗಾಗಿ ಮದುವೆಯಲ್ಲಿ ಫಲತಾಂಬೂಲ ಕೊಡಲೇಬೇಕೆಂದು ಒಂದು ಬಾರಿ ಕೊಡುತ್ತಿದ್ದಾರೆ. ಅದೂ ಕಿತ್ತಲೆ ಹಣ್ಣಿನ ಗಾತ್ರದ ತೆಂಗಿನಕಾಯಿ.

ಇನ್ನು ತೆಂಗಿನಕಾಯಿ ಬೆಲೆ ವಿಚಾರಕ್ಕೆ ಬರುವುದಾದರೆ ಅಡುಗೆಗೆ ಬಳಸುವ ಚೆನ್ನಾಗಿ ಬಲಿತ ತೆಂಗಿನಕಾಯಿ ಒಂದಕ್ಕೆ 50-60 ರೂಪಾಯಿಗೆ ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಕೊರತೆ ಉಂಟಾಗಿದೆ. ಕಳೆದ ಎರಡು ಮೂರು ತಿಂಗಳಿನಿಂದ ಬಿಸಿಲು ಹೆಚ್ಚಾಗಿದ್ದು ಎಳನೀರು ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ದಿನವೊಂದಕ್ಕೆ 500 ಎ...