Bengaluru,ಬೆಂಗಳೂರು, ಮೇ 1 -- ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ವಾಡಿಕೆಯಂತೆ ತಿಂಗಳ ಮೊದಲ ದಿನವೇ ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕರಣೆ ಮಾಡಿವೆ. ದೇಶಾದ್ಯಂತ ಇಂದಿನಿಂದ (ಮೇ 1) ಜಾರಿಗೆ ಬರುವಂತೆ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ದರವನ್ನು 19 ರೂಪಾಯಿ ಇಳಿಕೆ ಮಾಡಿದೆ. ಪರಿಷ್ಕೃತ ದರದ ಪ್ರಕಾರ, 19 ಕಿಲೋ ತೂಕದ ವಾಣಿಜ್ಯ ಸಿಲಿಂಡರ್ ದರ ಭಾರತದ ರಾಜಧಾನಿ ನವದೆಹಲಿಯಲ್ಲಿ 1,745.50 ರೂಪಾಯಿ ಆಗಿದೆ. ಕಳೆದ ತಿಂಗಳು ಎಲ್‌ಪಿಜಿ 19 ಕಿಲೋ ವಾಣಿಜ್ಯ ಸಿಲಿಂಡರ್ ದರ 1764.5 ರೂಪಾಯಿ ಇತ್ತು.

ದೇಶದ ವಾಣಿಜ್ಯ ನಗರಿ ಮುಂಬಯಿಯಲ್ಲೂ ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕರಣೆಯಾಗಿದೆ. ಅಲ್ಲಿ, ಕಳೆದ ತಿಂಗಳು 19 ಕಿಲೋ ತೂಕದ ವಾಣಿಜ್ಯ ಸಿಲಿಂಡರ್ ದರ 1,717.50 ರೂಪಾಯಿ ಇತ್ತು. ಈಗ 19 ರೂಪಾಯಿ ಇಳಿಕೆಯಾಗಿ 1,698.50 ರೂಪಾಯಿಗೆ ತಲುಪಿದೆ.

ಚೆನ್ನೈನಲ್ಲಿ 19 ಕಿಲೋ ವಾಣಿಜ್ಯ ಸಿಲಿಂಡರ್ ದರ 1930 ರೂಪಾಯಿ ಇದ್ದದ್ದು 19 ರೂಪಾಯಿ ಇಳಿಕೆಯಾಗಿ1,911 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 20 ರೂಪಾಯಿ ಇಳಿದು...