ಭಾರತ, ಏಪ್ರಿಲ್ 4 -- ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ ಪಂದ್ಯದಿಂದ ಮುಂಬೈ ಇಂಡಿಯನ್ಸ್ (Lucknow Super Giants vs Mumbai Indians) ತಂಡದ ಅನುಭವಿ ಬ್ಯಾಟರ್‌ ರೋಹಿತ್ ಶರ್ಮಾ (Rohit Sharma) ಹೊರಗುಳಿಯಲಿದ್ದಾರೆ. ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಎಂಐ ನಾಯಕ ಹಾರ್ದಿಕ್‌ ಪಾಂಡ್ಯ, ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಈ ವೇಳೆ ತಂಡದ ಆಡುವ ಬಳಗದಲ್ಲಿನ ಬದಲಾವಣೆ ಕುರಿತು ಪಾಂಡ್ಯ ಮಾಹಿತಿ ನೀಡಿದರು.

"ರೋಹಿತ್ ಅವರ ಮೊಣಕಾಲಿಗೆ ಪೆಟ್ಟಾಗಿತ್ತು. ಹೀಗಾಗಿ ಅವರು ತಂಡದಿಂದ ಹೊರಗುಳಿದಿದ್ದಾರೆ," ಎಂದು ಹಾರ್ದಿಕ್ ಪಾಂಡ್ಯ ಟಾಸ್‌ ಗೆದ್ದ ಬಳಿಕ ಹೇಳಿದ್ದಾರೆ. ಎಲ್ಎಸ್‌ಜಿ ವಿರುದ್ಧದ ಪಂದ್ಯದಿಂದ ರೋಹಿತ್ ಹೊರಗುಳಿದಿರುವುದರಿಂದ, ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ರಿಯಾನ್ ರಿಕ್ಲೆಟನ್ ಅವರೊಂದಿಗೆ ವಿಲ್ ಜಾಕ್ಸ್ ಬ್ಯಾಟಿಂಗ್ ಆರಂಭಿಸಲಿದ್ದಾರೆ. ಪಂದ್ಯಕ್ಕೆ ರಾಜ್ ಅಂಗದ್ ಬಾವಾ ಮುಂಬೈ ಇಂಡಿಯನ್ಸ್ ಪರ ಪದಾರ್ಪಣೆ ಮಾಡುತ್ತಿದ್ದ...