ಭಾರತ, ಏಪ್ರಿಲ್ 24 -- ಎಲ್ಲರ ಚಿತ್ತ ಪಹಲ್ಗಾಮ್‌ನತ್ತ: ಜಮ್ಮು - ಕಾಶ್ಮೀರದ ಪಹಲ್ಗಾಮ್‌ ದಾಳಿಯಲ್ಲಿ 26 ಪ್ರವಾಸಿಗರನ್ನು ಉಗ್ರರು ಹತ್ಯೆ ಮಾಡಿದರು. ಹಲವರು ಗಾಯಗೊಂಡರು. ಪಹಲ್ಗಾಮ್‌ನಲ್ಲಿ ಉಗ್ರರು ಮಂಗಳವಾರ (ಏಪ್ರಿಲ್ 22) ಈ ದಾಳಿ ನಡೆಸಿದ್ದು, ಪುರುಷರನ್ನೇ ಟಾರ್ಗೆಟ್ ಮಾಡಿ ಹತ್ಯೆ ಮಾಡಿದ್ದಾರೆ. ಅವರ ಪತ್ನಿ, ಮಕ್ಕಳನ್ನು ಕೊಲ್ಲದೇ ಬಿಟ್ಟು, "ಮೋದಿಗೆ ಹೋಗಿ ಹೇಳಿ" ಎಂಬ ಸಂದೇಶವನ್ನು ಉಗ್ರರ ರವಾನಿಸಿರುವುದು ಭಾರತೀಯರನ್ನು ಕೆರಳಿಸಿದೆ. ಮೃತದೇಹಗಳು ಪ್ರವಾಸಿಗರ ತಾಯ್ನಾಡಿಗೆ ತಲುಪುತ್ತಿದ್ದು, ಚಿತೆಯ ಬೆಂಕಿ ಆರುವ ಮೊದಲು ಉಗ್ರರನ್ನು ಹೊಡೆದುರುಳಿಸಬೇಕು ಎಂಬ ಆಕ್ರೋಶ ಎಲ್ಲರಲ್ಲೂ ಮಡುಗಟ್ಟಿದೆ. ಇದು ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕವೂ ವ್ಯಕ್ತವಾಗುತ್ತಿದೆ. ಬಹುತೇಕ ಸೋಷಿಯಲ್ ಮೀಡಿಯಾಗಳಲ್ಲಿ ಆಲ್ ಐಸ್‌ ಆನ್ ಪಹಲ್ಗಾಮ್‌ (All eyes on Pahalgam) ಎಂಬ ಘೋಷಣೆ ಬೇರೆ ಬೇರೆ ಚಿತ್ರಗಳೊಂದಿಗೆ ಶೇರ್ ಆಗುತ್ತಿದೆ. ಈ ವೈರಲ್ ಘೋಷ ವಾಕ್ಯದ ಅರ್ಥ ಏನು - ಇಲ್ಲಿದೆ ವಿವರ.

ಆಲ್ ಐಸ್ ಆನ್ (All eyes on) ಎಂಬುದು ಕಳೆದ ವ...