Bengaluru, ಮಾರ್ಚ್ 29 -- L2: Empuraan Collection Day 2: ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ನಟಿಸಿರುವ L2: ಎಂಪುರಾನ್ ಸಿನಿಮಾ ದಾಖಲೆ ದಾಖಲೆ ನಿರ್ಮಿಸುತ್ತಿದೆ. ಪೊಲಿಟಿಕಲ್‌ ಥ್ರಿಲ್ಲರ್‌ ಜಾನರ್‌ನ ಈ ಚಿತ್ರವನ್ನು ನಟ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡಿ, ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದಾರೆ. ಮಾರ್ಚ್ 27ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 2019ರಲ್ಲಿ ಬಿಡುಗಡೆಯಾದ ಬ್ಲಾಕ್‌ಬಸ್ಟರ್ ಲೂಸಿಫರ್‌ ಚಿತ್ರದ ಸೀಕ್ವೆಲ್ ಇದಾಗಿದ್ದು, ಬಿಡುಗಡೆಯಾದ ಎರಡೇ ದಿನಕ್ಕೆ ಹೊಸ ಮೈಲುಗಲ್ಲನ್ನು ದಾಟಿ ದಾಖಲೆ ಸೃಷ್ಟಿಸಿದೆ.

L2: ಎಂಪುರಾನ್ ಚಿತ್ರವು ಎರಡು ದಿನಗಳಲ್ಲಿಯೇ ವಿಶ್ವಾದ್ಯಂತ 100 ಕೋಟಿ ಗಳಿಕೆಯ ದಾಟಿದೆ. ಈ ವಿಷಯವನ್ನು ಚಿತ್ರವನ್ನು ನಿರ್ಮಿಸಿರುವ ಆಶೀರ್ವಾದ್ ಸಿನಿಮಾಸ್ ಅಧಿಕೃತವಾಗಿ ಘೋಷಣೆ ಮಾಡಿದೆ. "48 ಗಂಟೆಗಳಲ್ಲಿಯೇ ಎಂಪುರಾನ್ ಚಿತ್ರವು ವಿಶ್ವಾದ್ಯಂತ 100 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಮಲಯಾಳಂ ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ" ಎಂದು ಸಾಮ...