Bangalore, ಮೇ 15 -- ಕೋಲ್ಡ್‌ ಕೇಸ್‌ ಎನ್ನುವುದು 2021ರ ಮಲಯಾಳಂ ಭಾಷೆಯ ಥ್ರಿಲ್ಲರ್‌ ಹಾರರ್‌ ಸಿನಿಮಾ. ತನು ಬಾಲಕ್‌ ನಿರ್ದೇಶನದ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಪೃಥ್ವಿರಾಜ್‌ ಸುಕುಮಾರನ್‌ ಮತ್ತು ಆದಿತಿ ಬಾಲನ್‌ ನಟಿಸಿದ್ದಾರೆ.

ಪೂಜಾ ಮೋಹನರಾಜ್, ಅನಿಲ್ ನೆಡುಮಂಗಡ, ಲಕ್ಷ್ಮಿ ಪ್ರಿಯಾ ಚಂದ್ರಮೌಳಿ, ಆನಂದ್, ಮತ್ತು ರಾಜೇಶ್ ಹೆಬ್ಬಾರ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಸಿನಿಮಾದ ಕಥಾವಸ್ತುವು ಐಪಿಎಸ್ ಅಧಿಕಾರಿ ಎಂ. ಸತ್ಯಜಿತ್ (ಪೃಥ್ವಿರಾಜ್) ಮತ್ತು ತನಿಖಾ ಪತ್ರಕರ್ತೆ ಮೇಧಾ ಪದ್ಮಜಾ (ಅದಿತಿ) ಇವರಿಬ್ಬರು ಒಂದೇ ಬಾರಿ ನಡೆಸುವ ಎರಡು ನಿಗೂಢ ಕೊಲೆ ಪ್ರಕರಣದ ಬೆನ್ನು ಹತ್ತುತ್ತದೆ.

ಇವರಿಬ್ಬರು ಪ್ರತ್ಯೇಕ ಪ್ರತ್ಯೇಕವಾಗಿ ತನಿಖೆ ಮಾಡುತ್ತಾರೆ. ಅಂತಿಮವಾಗಿ ಇವರಿಬ್ಬರು ಎದುರಾಗುತ್ತಾರೆ.

ಕೋಲ್ಡ್‌ ಕೇಸ್‌ ಸಿನಿಮಾವು ಕೊರೊನಾ ಕಾರಣದಿಂದ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಇದು ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಜೂನ್‌ 30, 2021ರಲ್ಲಿ ರಿಲೀಸ್‌ ಆಗಿತ್ತು.

ಈ ಸಿನಿಮಾದ ಬಹುತೇಕ ದೃಶ್ಯಗಳನ...