ಭಾರತ, ಏಪ್ರಿಲ್ 2 -- ಪಾಕಿಸ್ತಾನ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಆತಿಥೇಯ ನ್ಯೂಜಿಲೆಂಡ್‌ ತಂಡ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆಯೊಂದಿಗೆ ಒಂದು ಪಂದ್ಯಕ್ಕಿಂತ ಮುಂಚೆಯೇ ಸರಣಿ ಒಲಿಸಿಕೊಂಡಿದೆ. ಈಗಾಗಲೇ ಟಿ20 ಸರಣಿಯನ್ನು ಭರ್ಜರಿಯಾಗಿ ಗೆದ್ದಿರುವ ತಂಡ, ಇದೀಗ ಏಕದಿನ ಸರಣಿಯಲ್ಲೂ ಮೇಲುಗೈ ಸಾಧಿಸಿದೆ. ಮಿಚೆಲ್ ಹೇ ಅಜೇಯ 99 ರನ್‌ ಹಾಗೂ ಬೆನ್‌ ಸೀರ್ಸ್‌ 5 ವಿಕೆಟ್‌ ಗೊಂಚಲು ಪಡೆದು ತಂಡದ ಗೆಲುವನ್ನು ಸುಲಭವಾಗಿಸಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕಿವೀಸ್‌ 8 ವಿಕೆಟ್‌ ಕಳೆದುಕೊಂಡು 292 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ತಂಡವು ಕೇವಲ 41.2 ಓವರ್‌ಗಳಲ್ಲಿ 208 ರನ್‌ ಗಳಿಸಿ ಆಲೌಟ್‌ ಆಯ್ತು. ಬ್ಯಾಟಿಂಗ್‌ನಲ್ಲಿ ತಂಡ ಮತ್ತೊಮ್ಮೆ ವಿಫಲವಾಯ್ತು. ಹೀಗಾಗಿ ಕಿವೀಸ್‌ 84 ರನ್‌ಗಳ ಭರ್ಜರಿ ಜಯ ಸಾಧಿಸಿತು.

ಕಿವೀಸ್‌ ತಂಡಕ್ಕೆ ಉತ್ತಮ ಆರಂಭ ಆರಂಭ ಸಿಕ್ಕಿತು. ನಿಕ್‌ ಕೆಲ್ಲಿ 31 ರನ್‌ ಗಳಿಸಿದರು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಎರಡಂ...