ಭಾರತ, ಏಪ್ರಿಲ್ 15 -- ನಾಗೇಶ್‌ ಹೆಗಡೆ ಬರಹ: ಅತ್ಯಾಚಾರಿಯನ್ನು ಎನ್‌ಕೌಂಟರ್‌ ಮಾಡಿ ಕೊಂದ ಬಗ್ಗೆ ಭಾರೀ ಉಘೇ ಉಘೇ ವ್ಯಕ್ತವಾಗುತ್ತಿದೆ. ಆದರೆ ಇದು ತಪ್ಪೆಂದೂ ಪೊಲೀಸರ ಈ ವಿಧಾನಕ್ಕೆ ಜೈಕಾರ ಹಾಕುತ್ತಿದ್ದರೆ (ಬುಲ್ಡೋಝರ್‌ ನ್ಯಾಯದ ಹಾಗೆ) ನಾಳೆ ಅಮಾಯಕರೂ ಬಲಿ ಆದಾರೆಂದೂ ಹೇಳಲಾಗುತ್ತಿದೆ. ಪತ್ರಿಕೆಗಳಲ್ಲಿ ಹೀಗೇ ವಿವೇಕದ ಸಂಪಾದಕೀಯ ಪ್ರಕಟವಾಗುತ್ತದೆ.

ಆದರೆ ನ್ಯಾಯಾಂಗ ತೀರ ನಿಧಾನದ್ದೆಂದೂ ಅತ್ಯಾಚಾರಿ ಆರಾಮಾಗಿ ತೆರಿಗೆದಾರರ ಖರ್ಚಿನಲ್ಲಿ ಜೈಲಲ್ಲಿ ತಿಂದುಣ್ಣುತ್ತ ಇನ್ನೂ ಅದೆಷ್ಟೋ ವರ್ಷ ಹಾಯಾಗಿರುತ್ತಾನೆಂದೂ ಹಾಗಾಗಿ ಎನ್‌ಕೌಂಟರೇ ಸರಳ ವಿಧಾನವೆಂದೂ ಇನ್ನು ಕೆಲವರು ವಾದಿಸುತ್ತಾರೆ.

ಇವೆರಡಕ್ಕೂ ಪರಿಹಾರವಾಗಿ ಮೂರನೆಯ ಒಂದು ಉಪಾಯ ಇದೆ:

ನಮ್ಮ ಸಮಾಜದಲ್ಲಿ ಅಪರಾಧ ಏಕೆ ಹೆಚ್ಚುತ್ತಿದೆ ಎಂದರೆ ತಮ್ಮ ಅಪರಾಧಕ್ಕೆ ಎಂಥ ಶಿಕ್ಷೆ ಕಾದಿದೆ ಎಂಬುದರ ಅರಿವು ಬಹಳಷ್ಟು ಜನರಿಗೆ ಇರುವುದಿಲ್ಲ. ಏಕೆಂದರೆ ಜೈಲಿನೊಳಗಿನ ಜಗತ್ತನ್ನು ನಾವು ಅವರಿಗೆ ತೋರಿಸುವುದೇ ಇಲ್ಲ. ಪಠ್ಯಪುಸ್ತಕಗಳಲ್ಲಿ ಹೀರೋಗಳ ಬಗ್ಗೆ ಪಾಠ ಇರುತ್ತದೆಯೇ ವಿನಾ ನ...