ಭಾರತ, ಫೆಬ್ರವರಿ 22 -- ನಾವು ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿಯು ಮೊದಲ 30 ಸೆಕೆಂಡುಗಳಲ್ಲಿ ನಮ್ಮ ಬಗ್ಗೆ ಒಂದು ಅಭಿಪ್ರಾಯವನ್ನು ರೂಪಿಸಿಕೊಳ್ಳುತ್ತಾರೆ, ಫೋರ್ಬ್ಸ್‌ ಪತ್ರಿಕೆಯು ನಡೆಸಿದ ಒಂದು ಸಂಶೋಧನೆಯು ಈ ಬಗ್ಗೆ ಬೆಳಕು ಚೆಲ್ಲಿದೆ. ಈ ಮೊದಲ ಛಾಪು ಮೂಡುವ ಪ್ರಕ್ರಿಯೆಯನ್ನು ಥಿನ್ ಸ್ಲೈಸಿಂಗ್ (ಕೂದಲು ಸೀಳುವಿಕೆಯ) ಎಂದೇ ಕರೆಯುತ್ತೇವೆ. ಯಾರನ್ನೇ ನೋಡಿದ ಈ ಮೊದಲು 30 ಸೆಕಂಡ್‌ಗಳಲ್ಲಿ ನಮ್ಮ ಮೆದುಳು ಗಮನಿಸುವಿಕೆಯ ಮೂಲಕ ತನ್ನದೇ ಆದ ಒಂದು ಅಭಿಪ್ರಾಯ ಅವರ ಬಗ್ಗೆ ಮೂಡಿಸಿಕೊಳ್ಳುತ್ತದೆ. ಇದು ಸುಪ್ತ ಪ್ರಜ್ಞೆಯಲ್ಲಿ ಆಗುವ ಪ್ರಕ್ರಿಯೆ.

ಕೆಲವೊಮ್ಮೆ ನೀವೂ ಗಮನಿಸಿರಬಹುದು ಯಾರನ್ನಾದರೂ ಭೇಟಿ ಆದಾಗ ಅವರು ನಮ್ಮನ್ನು ಮಾತಾಡಿಸಿ ಹೋದರೂ ಅವರ ಮಾತಿನ ಪ್ರಭಾವ ಬಹುಕಾಲ ಸ್ಮರಣೆಯಲ್ಲಿ ಉಳಿಯುತ್ತದೆ. ಆದರೆ ಇತರರು ಎಷ್ಟೋ ಹೊತ್ತು ಕೂತು ಬಂದು ಹೋದರೂ ನೆನಪಲ್ಲಿ ಉಳಿಯುವುದಿಲ್ಲ. ಹಾಗಾದರೆ, ಯಾವ ಅಂಶಗಳು ಅವರನ್ನು ಪ್ರತ್ಯೇಕಿಸುತ್ತದೆ?

ಸೈಕಾಲಜಿಯ ಪ್ರಕಾರ ಒಬ್ಬರ ಮನಸಿನಲ್ಲಿ ನೆನಪಿಡಬಹುದಾದಂತಹ ವ್ಯಕ್ತಿತ್ವ ಮೂಡಿಸಿಕೊಳ್ಳಬೇ...