ಭಾರತ, ಏಪ್ರಿಲ್ 23 -- ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತನ್ನ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಎತ್ತಿನಗಾಡಿಯಲ್ಲಿ ಸವಾರಿ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಇವರ ಈ ಪ್ರಯಾಣದ ವಿಡಿಯೋ "ಹರಿ ಹರಿ ಹರಿ ಮುಗಿಲೆತ್ತರ ಹರಿ, ಶಿವನತ್ತಿರ ಮೆರೆಯುವ ನಂದಿ...ನಂದಿ, ಢಮ ಢಮರುಗ ಬೆಚ್ಚಿಸುವ ಜಗ ಮೆಚ್ಚಿಸುವ ಪರಶಿವ ನಂದಿ... ನಂದಿ. ನಡೆದರೆ ತೇರು.. ವೈಭವ ಜೋರು ತಡೆಯೋರು ಯಾರು ಆರ್ಭಟ ನೋಡು" ಹಿನ್ನೆಲೆ ಹಾಡಿನೊಂದಿಗೆ ವೈರಲ್‌ ಆಗುತ್ತಿದೆ. ತನ್ನ ಫಾರ್ಮ್‌ಹೌಸ್‌ನಲ್ಲಿ ದರ್ಶನ್‌ ಎತ್ತಿನ ಬಂಡಿಯಲ್ಲಿ ಸವಾರಿ ಮಾಡಿದ್ದಾರೆ.

ದರ್ಶನ್‌ ಎತ್ತಿನ ಬಂಡಿಯಲ್ಲಿ ಕುಳಿತಿದ್ದಾರೆ. ಬಂಡಿಯಲ್ಲಿ ಒಂದಿಷ್ಟು ಜನರು ನಿಂತಿದ್ದಾರೆ. ಆರಂಭದಲ್ಲಿ ಬಂಡಿ ನಿಧಾನವಾಗಿ ಪ್ರಯಾಣ ಆರಂಭಿಸಿದೆ. ಎತ್ತುಗಳು ಬಳಿಕ ವೇಗವಾಗಿ ಓಡಿವೆ. ಎತ್ತಿನ ಬಂಡಿ ಹೈಸ್ಪೀಡ್‌ನಲ್ಲಿ ಸಾಗಿದೆ. ಈ ವಿಡಿಯೋಗೆ ಅಭಿಮಾನಿಗಳು ಡಿ ಬಾಸ್‌ ಬೆಂಕಿ ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ.

ದರ್ಶನ್‌ ಫಾರ್ಮ್‌ಹೌಸ್‌ನಲ್ಲಿ ಹಲವು ಪ್ರಾಣಿಗಳು ಇವೆ. ಎತ್ತುಗಳು, ದನಗಳು, ಆಡುಗಳು, ಕುದುರೆಗ...