Bangalore, ಮೇ 15 -- ಬೆಂಗಳೂರು: ಕರ್ನಾಟಕದಲ್ಲಿ ಎಪ್ಪತ್ತು ಎಂಬತ್ತರ ದಶಕದಲ್ಲಿಯೇ ಖಗೋಳ ವಿಜ್ಞಾನದ ಕುರಿತು ನಿಖರವಾಗಿ ಅಧ್ಯಯನ ಮಾಡಿ ಆ ವಿಚಾರವನ್ನು ಕನ್ನಡದಲ್ಲಿ ಜನರಿಗೆ ಅರ್ಥವಾಗುವ ಹಾಗೆ ತಿಳಿಸಿಕೊಡುತ್ತಿದ್ದ ಗಣಿತ ಶಾಸ್ತ್ರ ಹಾಗೂ ಖಗೋಳಶಾಸ್ತ್ರದ ಜತೆಗೆ ಜ್ಯೋತಿಷ್ಯ ಶಾಸ್ತ್ರವನ್ನು ಅಧ್ಯಯನ ಮಾಡಿದ್ದ ವಿಜ್ಞಾನಿ ಪ್ರೊ.ಎಸ್‌.ಬಾಲಚಂದ್ರರಾವ್‌ ಅವರು ಬೆಂಗಳೂರಿನಲ್ಲಿ ನಿಧನರಾದರು. ಆ ಕಾಲದಲ್ಲಿ ವಿಜ್ಞಾನದಲ್ಲಿ ದೊಡ್ಡ ಹೆಸರು ಮಾಡಿದ್ದ ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯೂ ಆಗಿದ್ದ ಪ್ರೊ.ಎಚ್‌.ನರಸಿಂಹಯ್ಯ ಅವರ ಶಿಷ್ಯರಾಗಿ ಗುರುತಿಸಿಕೊಂಡು ಬಾಲಚಂದ್ರರಾವ್‌ ಅವರು ಖಗೋಳಶಾಸ್ತ್ರ ಹೇಗೆ ನಮ್ಮ ಬದುಕಿನೊಂದಿಗೆ ಸಂಬಂಧ ಹೊಂದಿದೆ ಎನ್ನುವುದನ್ನು ಜನತೆಗೆ ತಿಳಿಸಿಕೊಟ್ಟವರು. ಅದಕ್ಕೆ ಪೂರಕವಾಗಿ ಹಲವು ಕೃತಿಗಳನ್ನು ಕನ್ನಡದಲ್ಲಿ ಗಣಿತ ಮತ್ತು ಖಗೋಳ ವಿಜ್ಞಾನದ ವಿಚಾರದಲ್ಲಿ ಪ್ರಕಟಿಸಿದವರು.

ಮಲೆನಾಡಿನ ಸಾಗರ ತಾಲ್ಲೂಕು ತ್ಯಾಗರ್ತಿಯವರಾದ ಬಾಲಚಂದ್ರರಾವ್‌ ಅವರು 1944ರ ಡಿಸೆಂಬರ್ 30ರಂದು ಜನಿಸಿದರು. ಅವರಿಗೆ ಬಾಲ್...