Bangalore, ಮಾರ್ಚ್ 5 -- ಬೆಂಗಳೂರು: ಬೆಂಗಳೂರಿನಲ್ಲಿ ಸರ್ಕಾರಿ ಭೂಮಿಯನ್ನು ನಿಗದಿತ ಉದ್ದೇಶಗಳಿಗೆ ಪಡೆದು ಅದನ್ನು ಈಗ ಅನ್ಯ ಉದ್ದೇಶಕ್ಕೆ ಬಳಸುತ್ತಿರುವ ಮೇಲೆ ನಿಗಾ ಇರಿಸಲಾಗುತ್ತಿದೆ. ಅದರಲ್ಲೂ ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನು ಭಿನ್ನ ಉದ್ದೇಶಗಳಿಗೆ ಬಳಸಲು ಅವಕಾಶ ಕೂಡ ಇಲ್ಲ. ಕೋರ್ಟ್‌ ಕೂಡ ಇದನ್ನು ಸ್ಪಷ್ಟವಾಗಿಯೇ ಹೇಳಿದೆ. ಈಗಾಗಲೇ ಕರ್ನಾಟಕ ಅರಣ್ಯ ಇಲಾಖೆ ಭೂಮಿಯನ್ನು ಕೇಂದ್ರ ಕೈಗಾರಿಕಾ ಇಲಾಖೆ ಅಡಿ ಬರುವ ಎಚ್‌ಎಂಟಿಗೆ ದಶಕಗಳ ಹಿಂದೆ ನೀಡಲಾಗಿದ್ದು. ಈಗ ಕಾರ್ಖಾನೆಯಿಲ್ಲ. ಬದಲಿಗೆ ಭೂಮಿ ಬೇರೆ ಕಾರಣಗಳಿಗೆ ಬಳಕೆಯಾಗುತ್ತಿದ್ದು. ಅದನ್ನು ಹಂತಹಂತವಾಗಿ ವಾಪಸ್‌ ಪಡೆಯಲಾಗುತ್ತಿದೆ. ಈಗ ಭಾರತೀಯ ವಾಯುಪಡೆಗೆ ನೀಡಲಾಗಿರುವ ಭೂಮಿಯ ಸರದಿ. ನಾಲ್ಕು ದಶಕದ ಹಿಂದೆ ಮಂಜೂರು ಮಾಡಿದ್ದ ಭೂಮಿ ಅರಣ್ಯ ಆಗಿರುವ ಕಾರಣಕ್ಕೆ ವಾಪಸ್‌ ಪಡಯುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಬೆಂಗಳೂರಿನ ಪೀಣ್ಯ ಪ್ಲಾಂಟೇಷನ್ ಮತ್ತು ಜಾರಕಬಂಡೆ ಕಾವಲು ಪ್ರದೇಶದಲ್ಲಿ ಪ್ರಸ್ತುತ ಭಾರತೀಯ ವಾಯುಪಡೆ ವಶದಲ್ಲಿರುವ 444.12 ಎಕರೆ ಅರಣ್ಯ ಭೂಮಿಯನ್ನು...