ಭಾರತ, ಮಾರ್ಚ್ 30 -- ಎಲ್ಲಿ ನೋಡಿದರೂ ಘಿಬ್ಲಿ ಸ್ಟೈಲ್ ಇಮೇಜ್‌ಗಳದ್ದೇ ಹವಾ ಅಲ್ವ. ಒಂದು ಸಲ ಟ್ರೈ ಮಾಡಿ ನೋಡಬೇಕು. ನಮ್ಮ ಫೋಟೋವನ್ನೂ ಆ ಸ್ಟೈಲ್‌ನಲ್ಲಿ ಜನರೇಟ್ ಮಾಡಬೇಕು. ಹೇಗೆ ಅಂತ ಗೊತ್ತಾಗ್ತಾ ಇಲ್ಲ ಅಂತ ಹೇಳುವವರಿಗೆ ಇಲ್ಲಿದೆ ಒಂದು ಅವಕಾಶ, ಆದರೆ ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ನಿಮ್ಮ ಖಾತೆ ಇರಬೇಕು ಅಷ್ಟೆ.

ಚಾಟ್‌ಜಿಪಿಟಿ ಅಷ್ಟೇ ಅಲ್ಲ, ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಕೂಡ ಘಿಬ್ಲಿ ಸ್ಟೈಲ್ ಎಐ ಇಮೇಜ್ ಜನರೇಟ್ ಮಾಡಬಹುದು, ಒಂದೇ ಒಂದು ಇಮೇಜ್ ಜನರೇಟ್ ಮಾಡೋದಕ್ಕೆ ಅವಕಾಶ ಮಾಡಿಕೊಡುತ್ತೆ ಅದು. ಅಷ್ಟೆ. ತುಂಬಾ ಸರಳವಾಗಿ ಘಿಬ್ಲಿ ಸ್ಟೈಲ್ ಇಮೇಜ್ ಜನರೇಟ್ ಮಾಡಬಹುದು. ಈ ಕೆಳಗಿನ ಹಂತಗಳನ್ನು ಅನುಸರಿಸಿದರೆ ಸಾಕು. ಈ ಗ್ಯಾಲರಿಯಲ್ಲಿರುವ ಫೋಟೋಗಳನ್ನು ಗಮನಿಸಿ. ಅದರಲ್ಲಿರುವಂತೆ ಮಾಡಿದರೆ ಸಾಕು.

ಹಂತ 1: ನಿಮ್ಮ ಮೊಬೈಲ್‌ನಲ್ಲಿ ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್ (ಈ ಮೊದಲು ಟ್ವಿಟರ್) ಅನ್ನು ಓಪನ್ ಮಾಡಿ. ತಳಭಾಗದಲ್ಲಿ GROK ಅಂತ ಕಾಣುತ್ತಲ್ಲ. (ಮೇಲಿನ ಚಿತ್ರದಲ್ಲಿ ಕೆಂಪು ಸರ್ಕಲ್‌ನಲ್ಲಿ ಮಾರ್ಕ...