Amaravati, ಮಾರ್ಚ್ 12 -- ಆಂಧ್ರಪ್ರದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಅಮರಾವತಿಯ ಎಸ್‌ಆರ್‌ಎಂ ಎಪಿ ಶಿಕ್ಷಣ ಸಂಸ್ಥೆಯು ಅಮೆರಿಕದ ಕಾರ್ನೆಗೀ ಮೆಲನ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಶಾಲೆಯೊಂದಿಗೆ ಮಹತ್ವದ ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿದೆ. ಕೃತಕ ಬುದ್ದಿಮತ್ತೆ ವಿಷಯದಲ್ಲಿ ಕಾರ್ನೆಗೀ ಮೆಲನ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಶಾಲೆ (CMU SCS) ಯೊಂದಿಗೆ ಐದು ವರ್ಷಗಳ ಸಹಯೋಗವನ್ನು ಎಸ್‌ಆರ್‌ಎಂ ಹೊಂದಲಿದೆ. ಕಾರ್ನೆಗೀ ಮೆಲನ್ ವಿಶ್ವವಿದ್ಯಾಲಯವು ಕೃತಕ ಬುದ್ಧಿಮತ್ತೆ (AI) ಮತ್ತು ಅತ್ಯಾಧುನಿಕ ಸಂಶೋಧನೆಯಲ್ಲಿ ವಿಶ್ವದ ಅಗ್ರಗಣ್ಯ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಸಹಯೋಗವು ಯಂತ್ರ ಕಲಿಕೆ, ನೈಸರ್ಗಿಕ ಭಾಷಾ ಸಂಸ್ಕರಣೆ, ಕಂಪ್ಯೂಟರ್ ದೃಷ್ಟಿ, ಮೂಲಸೌಕರ್ಯ ಮತ್ತು ವ್ಯವಸ್ಥೆಗಳು ಮತ್ತು ಎಐ ನೀತಿಶಾಸ್ತ್ರ ಮತ್ತು ನೀತಿ ಸೇರಿದಂತೆ ಎಐ ಸಂಬಂಧಿತ ವಿಭಾಗಗಳಲ್ಲಿ ಜ್ಞಾನ, ನಾವೀನ್ಯತೆ ಮತ್ತು ಶಿಕ್ಷಣದ ಗಡಿಗಳನ್ನು ವಿಸ್ತರಿಸಲು ನೆರವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಸಹಯೋಗದ ಮೂಲಕ...