ಭಾರತ, ಏಪ್ರಿಲ್ 16 -- ನಟ-ನಿರ್ದೇಶಕ ರವಿಚಂದ್ರನ್‍ ಅವರು ತಮ್ಮ ಮುಂದಿನ ಚಿತ್ರಕ್ಕೆ ವ್ಯಾಪಕವಾಗಿ ಕೃತಕ ಬುದ್ಧಿಮತ್ತೆ ಬಳಸಿಕೊಳ್ಳುತ್ತಿರುವುದಾಗಿ ಹೇಳುತ್ತಲೇ ಇದ್ದಾರೆ. ಹೀಗಿರುವಾಗಲೇ, ಕನ್ನಡದಲ್ಲಿ ಸಂಪೂರ್ಣವಾಗಿ ಎಐ ಬಳಸಿಕೊಂಡು ಒಂದು ಚಿತ್ರ ಸದ್ದಿಲ್ಲದೆ ತಯಾರಾಗಿರುವುದಷ್ಟೇ ಅಲ್ಲ, ಈ ಚಿತ್ರ ಸೆನ್ಸಾರ್‍ ಸಹ ಆಗಿ ಭಾರತದ ಮೊದಲ ಎಐ ಚಿತ್ರ ಎಂಬ ಪ್ರಮಾಣಪತ್ರವನ್ನೂ ಪಡೆದಿದೆ.

ಈ ಚಿತ್ರದ ಹೆಸರು 'ಲವ್ ಯೂ'. ಈ ಚಿತ್ರವನ್ನು ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ ಎಸ್‍. ನರಸಿಂಹಮೂರ್ತಿ. ಇನ್ನು, ಈ ಚಿತ್ರವನ್ನು ಎಐ ಮೂಲಕ ಸೃಷ್ಟಿಸಿರುವುದು ನೂತನ್‍. ಈಗಾಗಲೇ ಕೆಲವು ಚಿತ್ರಗಳ ಪ್ರೀ-ಪ್ರೊಡಕ್ಷನ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಎಐ ಬಳಸಲಾಗುತ್ತಿದೆ. ಆದರೆ, ಈ ಚಿತ್ರತಂಡವು ಸಂಪೂರ್ಣವಾಗಿ ಎಐ ಮೂಲಕವೇ ಇಡೀ ಚಿತ್ರವನ್ನು ಸಂಪೂರ್ಣವಾಗಿ ಸೃಷ್ಟಿ ಮಾಡಿದೆ.

ಈ ಚಿತ್ರದ ಕುರಿತು ಮಾತನಾಡುವ ನರಸಿಂಹಮೂರ್ತಿ, 'ಕಥೆ, ಸಾಹಿತ್ಯ, ಸಂಭಾಷಣೆ ಹೊರತುಪಡಿಸಿದರೆ, ಮಿಕ್ಕೆಲ್ಲವನ್ನೂ ಎಐ...