ಭಾರತ, ಮಾರ್ಚ್ 25 -- ಶಿಲ್ಲಾಂಗ್ (ಮೇಘಾಲಯ): ಮಂಗಳವಾರ (ಮಾರ್ಚ್ 25) ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಎಎಫ್‌ಸಿ ಏಷ್ಯನ್ ಕಪ್ 2027ರ ಕ್ವಾಲಿಫೈಯರ್​​ನ ಮೂರನೇ ಸುತ್ತಿನ ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ತಂಡಕ್ಕಿಂತ 59 ಸ್ಥಾನ ಕೆಳಗಿರುವ ಬಾಂಗ್ಲಾದೇಶ ವಿರುದ್ಧ ಗೋಲುರಹಿತ ಡ್ರಾದಲ್ಲಿ ಕೊನೆಗೊಳಿಸಿತು. ಭಾರತ ತಂಡದ ಕೋಚ್ ಆಗಿ ಮನೋಲೋ ಮಾರ್ಕ್ವೆಜ್ ಸ್ಪರ್ಧಾತ್ಮಕ ಅಂತಾರಾಷ್ಟ್ರೀಯ ಫುಟ್ಬಾಲ್​ನಲ್ಲಿ ತಮ್ಮ ಪ್ರಯಾಣವನ್ನು ಮುಜುಗರದ ರೀತಿ ಪ್ರಾರಂಭಿಸಿದ್ದಾರೆ.

ಅರ್ಹತಾ ಗುಂಪಿನಲ್ಲಿ ಅತ್ಯಂತ ಕಡಿಮೆ ಶ್ರೇಯಾಂಕಿತ ತಂಡವಾದ ಬಾಂಗ್ಲಾದೇಶ, ಫಲಿತಾಂಶವನ್ನು ಗೆಲುವಿನಂತೆ ಆಚರಿಸಿತು. ಪಂದ್ಯ ಡ್ರಾಗೊಂಡ ಹಿನ್ನೆಲೆ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ಹಂಚಿಕೆ ಮಾಡಲಾಗಿದೆ. ಇದೇ ಮೈದಾನದಲ್ಲಿ ಕಳೆದ ಬುಧವಾರ ನಡೆದಿದ್ದ ಸೌಹಾರ್ಧ ಪಂದ್ಯದಲ್ಲಿ ಮಾಲ್ಡೀವ್ಸ್ ವಿರುದ್ಧ 3-0 ಗೋಲುಗಳ ಅಂತರದಿಂದ ಗೆದ್ದಿದ್ದ ಭಾರತ, ಮಹತ್ವದ ಪಂದ್ಯದಲ್ಲಿ ಬಾಂಗ್ಲಾ ಎದುರು ಡ್ರಾ ಸಾಧಿಸಿದೆ. 2027ರ ಎಎಫ್​​ಸಿ ಏಷ್ಯನ್​ ಕಪ್​ಗೆ ಅರ್ಹತ...