नई दिल्ली, ಏಪ್ರಿಲ್ 14 -- ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಗಾಯದ ಸಮಸ್ಯೆ ಕಾರಣ 2025ರ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಹೊರಬಿದ್ದಿದ್ದಾರೆ. ಪರಿಣಾಮ ಋತುರಾಜ್ ಅನುಪಸ್ಥಿತಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವ ವಹಿಸಿದ್ದಾರೆ. ಆದರೆ ಗಾಯಕ್ವಾಡ್​ಗೆ ಬದಲಿಯಾಗಿ​ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ವರದಿಗಳ ಪ್ರಕಾರ, ಗಾಯಕ್ವಾಡ್ ಬದಲಿಗೆ 17 ವರ್ಷದ ಆಯುಷ್ ಮಾತ್ರೆ ಅವರನ್ನು ಸಿಎಸ್​ಕೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೆ ಅವರನ್ನು ಎರಡು ವಾರಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿದ್ದು, ಅದರ ನಂತರವೇ ತಂಡಕ್ಕೆ ಸೇರಲಿದ್ದಾರೆ.

ಆಯುಷ್ ಇಲ್ಲಿಯವರೆಗೆ ಒಂದೇ ಒಂದು ವೃತ್ತಿಪರ ಟಿ20 ಪಂದ್ಯವಾಡಿಲ್ಲ. ಹೀಗಿದ್ದಾಗ, ಯುವಕನಿಂದ ಹೆಚ್ಚು ನಿರೀಕ್ಷಿಸುವುದು ವ್ಯರ್ಥ. ದೇಶೀಯ ಕ್ರಿಕೆಟ್​​ನಲ್ಲಿ 16 ಪಂದ್ಯಗಳು ಆಡಿರುವ ಈತನ ಅಂಕಿ ಅಂಶಗಳು ಅತ್ಯುತ್ತಮವಾಗಿವೆ. ಆದರೆ ಆತನ ಮೇಲೆ ಹೆಚ್ಚು ನಿರೀಕ್ಷೆ ಇಡದೆ ತಂಡದಲ್ಲಿ ತಲೆದೋರಿರುವ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಕೆಲಸ ಮಾಡಬೇಕು. ಆಗ ಮಾತ್ರ ಈ ಋತುವಿನಲ...