ಭಾರತ, ಫೆಬ್ರವರಿ 6 -- ಮೆನೊಪಾಸ್‌ಗೆ ಋತುಬಂಧ ಎಂಬ ಪದ ಬಳಕೆಯಲ್ಲಿದೆ. ಕವಿ ವಡ್ಡಗೆರೆ ನಾಗರಾಜಯ್ಯ ಅವರು ಮೆನೊಪಾಸ್‌ಗೆ ಕನ್ನಡದಲ್ಲಿಯೇ ಹೊಸ ಪದ ಟಂಕಿಸಿದ್ದಾರೆ. ಋತುಬಂಧವು ಮುಟ್ಟಳಿ ಆಗಬಾರದೆ? ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದ ಪೋಸ್ಟ್‌ ಹೊಸ ಚರ್ಚೆಗೆ ನಾಂದಿ ಹಾಡಿದೆ. ವಡ್ಡಗೆರೆ ನಾಗರಾಜಯ್ಯ ಬರೆದ ಲೇಖನವನ್ನು ಯಥಾವತ್‌ ಈ ಮುಂದೆ ನೀಡಲಾಗಿದೆ.

ಮುಟ್ಟು ನಿಲ್ಲುವ ಪ್ರಕ್ರಿಯೆಯನ್ನು ಇಂಗ್ಲೀಶಿನಲ್ಲಿ menopause ಎನ್ನುತ್ತಾರೆ. ನಾಲ್ಕೈದು ವರ್ಷಗಳ ಹಿಂದೆ ನನ್ನ ಕೆಲವು ಗೆಳತಿಯರಿಗೆ, 'ಮುಟ್ಟು ನಿಲ್ಲುವಿಕೆಗೆ (ಮೆನೋಪಾಸ್) ಕನ್ನಡದಲ್ಲಿ ಏನಂತಾರೆ?' ಎಂಬ ಪ್ರಶ್ನೆ ಕೇಳಿದೆ.

ಒಂದಿಬ್ಬರು ಸಂಕೋಚದಿಂದ 'ನನಗೆ ಅದರ ಬಗ್ಗೆ‌ ಮಾಹಿತಿ ಇಲ್ಲ' ಅಂದರು. ಒಬ್ಬ ಗೆಳತಿ, 'ನಂಗಿನ್ನೂ ಮೂವತ್ತೆಂಟು. ಅದರ ಬಗ್ಗೆ ಈಗಲೇ ಯಾಕೆ ತಲೆ ಕೆಡಿಸಿಕೊಳ್ಳಲಿ?' ಅಂದಳು. ಇನ್ನೊಬ್ಬ ಗೆಳತಿ, 'ನಿನ್ನ ಯೆಣ್ತಿನ ಕೇಳು. ನಂಗ್ಯಾಕೆ ಕೇಳ್ತೀಯ' ಅಂದಳು. ಐದಾರು ಗೆಳತಿಯರು 'ಋತುಬಂಧ' ಎಂದು ಹೇಳಿದರು.

''ಋತುಬಂಧ', 'ಋತುಸ್ತಂಭನ' ಎಂಬುವೆಲ್ಲವೂ ಸಂ...