ಭಾರತ, ಏಪ್ರಿಲ್ 9 -- ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ಮಂಗಳೂರನ್ನು ಕೇರಳಕ್ಕೆ ಸಂಪರ್ಕಿಸುತ್ತದೆ. ಆದರೆ ಪಂಪ್ ವೆಲ್ ನಿಂದ ಮಂಗಳೂರು ಹೊರವಲಯದ ತೊಕ್ಕೊಟ್ಟು ತಲುಪುವುದೇ ದುಸ್ತರವಾಗಿರುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಕಾರಣ ಉಳ್ಳಾಲದಲ್ಲಿರುವ ನೇತ್ರಾವತಿ ಹಳೇಯ ಸೇತುವೆಯನ್ನು ದುರಸ್ತಿಗಾಗಿ ಒಂದು ತಿಂಗಳು ಬಂದ್ ಮಾಡಲಾಗಿದೆ. ತಲಪಾಡಿಯಿಂದ ಮಂಗಳೂರು ನಗರಕ್ಕೆ ಬರುವ ಈ ಸೇತುವೆ ಬಂದ್ ಮಾಡಿದ ಕಾರಣ, ವಾಹನ ಸವಾರರು ನಿತ್ಯ ಹೈರಾಣಾಗುತ್ತಿದ್ದಾರೆ. ಪ್ರತಿದಿನವೂ ಇಲ್ಲಿ ಟ್ರಾಫಿಕ್ ಜಾಮ್ ತಲೆದೋರುತ್ತಿದೆ. ಕಳೆದ ಡಿಸೆಂಬರ್ ನಲ್ಲಷ್ಟೇ ಈ ಸೇತುವೆ ದುರಸ್ತಿ ನಡೆದಿತ್ತು, ಮತ್ತೆ ಮಾಡುವ ದುರಸ್ತಿಗೆ ಒಂದು ತಿಂಗಳು ಬೇಕೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಂಗಳೂರಿನಿಂದ ಕಾಸರಗೋಡು ಸಹಿತ ಕೇರಳ ರಾಜ್ಯಕ್ಕೆ ಸಂಪರ್ಕಿಸುವ ಪ್ರಮುಖ ಹೆದ್ದಾರಿ ಇದು. ಮಂಗಳೂರು ಸಿಟಿಯಿಂದ ದೇರಳಕಟ್ಟೆಗೆ ಹೋಗಬೇಕಾದರೂ ಈ ಸೇತುವೆ ಅಗತ್ಯ. ದೇರಳಕಟ್ಟೆಗೆ ದೂರದೂರಿನಿಂದ ಮಂಗಳೂರಿಗೆ ಆಗಮಿಸುವವರು ಆಸ್ಪತ್ರೆಗೆಂದು ತೆರಳುತ್ತ...