ಭಾರತ, ಫೆಬ್ರವರಿ 21 -- ಮಂಗಳೂರು: ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಕಾಲಾವಧಿ ಮಖೆ ಜಾತ್ರೆ ಗುರುವಾರ (ಫೆ.20) ಆರಂಭಗೊಂಡಿದ್ದು, ಮಾರ್ಚ್ 25ರವರೆಗೆ ನಡೆಯಲಿದೆ. ವೇ.ಮೂ.ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪವಿತ್ರಪಾಣಿ ಕರಾಯ ವಿಷ್ಣಜುಮೂರ್ತಿ ಕುದ್ದಣ್ಣಾಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್ ತಿಳಿಸಿದ್ದಾರೆ.

ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಕಾಲಾವಧಿ ಮಖೆ ಜಾತ್ರೆ ಶುರುವಾಗಿದ್ದು 20 ರಂದು ಅಷ್ಟಮಿ 1ನೇ ಮಖೆಕೂಟ ನಡೆಯಿತು. ರಾತ್ರಿ 8.30ರಿಂದ ಬಲಿ ಹೊರಟು, ಉತ್ಸವ, ರಥೋತ್ಸವ, ಬಲಿ, ಮಹಾಪೂಜೆ ನೆರವೇರಿತು. ಫೆ. 21ರಂದು ಪ್ರಾತಃಕಾಲ ತೀರ್ಥಸ್ನಾನ, ಬೆಳಗ್ಗೆ 7.30ಕ್ಕೆ, ದರ್ಶನ ಬಲಿ ಬಟ್ಟಲು ಕಾಣಿಕೆ, 24ರಂದು ಗಣಪತಿಹೋಮ, ಶತರುದ್ರಾಭಿಷೇಕ, ಸೀಯಾಳಾಭಿಷೇಕ, ಚಂಡಿಕಾಹೋಮ, ಅನ್ನಸಂತರ್ಪಣೆ ಇರಲಿದೆ. ಅಭಿಷೇಕಕ್ಕೆ ಸೀಯಾಳವನ್ನು 23ರ ಸಂಜೆಯೊಳಗೆ ತಲುಪಿಸಬೇಕು ಎಂದು ದೇವಳದ ಆಡಳಿತ ಮಂಡಳಿ ವಿನಂತಿಸಿದೆ. ...