ಭಾರತ, ಏಪ್ರಿಲ್ 4 -- Coolie Vs 45: ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ಒಂದಷ್ಟು ಸಿನಿಮಾಗಳು ನಿರೀಕ್ಷೆ ಹೆಚ್ಚಿಸಿವೆ. ಸ್ಟಾರ್‌ ನಟರ ಸಿನಿಮಾಗಳು ಬಿಡುಗಡೆಗೆ ಸಾಲುಗಟ್ಟಿ ನಿಂತಿವೆ. ಆ ಪೈಕಿ ಕನ್ನಡಕ್ಕಷ್ಟೇ ಸೀಮಿತವಾಗದ ಪ್ಯಾನ್‌ ಇಂಡಿಯನ್‌ ಸಿನಿಮಾಗಳೂ ಕನ್ನಡದಲ್ಲಿ ಈ ವರ್ಷ ನಿರ್ಮಾಣವಾಗಿವೆ. ಆಗುತ್ತಿವೆ. ಹಬ್ಬದ ಸೀಸನ್‌, ರಜೆ ದಿನಗಳನ್ನೇ ಟಾರ್ಗೆಟ್‌ ಮಾಡಿಕೊಂಡ ಚಿತ್ರತಂಡಗಳು, ಈಗಾಗಲೇ ಬಿಡುಗಡೆ ದಿನಾಂಕವನ್ನೂ ಲಾಕ್‌ ಮಾಡಿಕೊಂಡಿವೆ. ಶೂಟಿಂಗ್‌ ಜತೆಗೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಮಾಡುತ್ತ ಪ್ರಚಾರದಲ್ಲಿಯೂ ಬಿಜಿಯಾಗಿವೆ. ಹೀಗಿರುವಾಗಲೇ ಏಕಕಾಲದಲ್ಲಿ ನಟ ಉಪೇಂದ್ರ ಅವರ ಎರಡು ಪ್ಯಾನ್‌ ಇಂಡಿಯನ್‌ ಸಿನಿಮಾಗಳು ತೆರೆಗೆ ಬರುತ್ತಿವೆ!

ಹೌದು, ರಿಯಲ್‌ ಸ್ಟಾರ್‌ ಉಪೇಂದ್ರ ಯುಐ ಸಿನಿಮಾ ಬಳಿಕ, ಕನ್ನಡ ಮಾತ್ರವಲ್ಲದೆ ಪರಭಾಷೆಯ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಇದೀಗ ಅಚ್ಚರಿಯ ರೀತಿಯಲ್ಲಿ ಅವರ ಎರಡು ಪ್ಯಾನ್‌ ಇಂಡಿಯನ್‌ ಸಿನಿಮಾಗಳು ಕೇವಲ ಒಂದೇ ದಿನದ ಅಂತರದಲ್ಲಿ ಬಿಡುಗಡೆ ಆಗಲಿವೆ. ಈಗಾಗಲೇ ಆ ಎರಡೂ ಸಿನಿ...