Dharwad, ಏಪ್ರಿಲ್ 16 -- ಕರ್ನಾಟಕದ ಉಪಲೋಕಾಯುಕ್ತರಾದ ಬಿ.ವೀರಪ್ಪ ಅವರು ಜಿಲ್ಲಾ ಪ್ರವಾಸ ಕೈಗೊಂಡು ಕೆರೆಗಳ ಅಭಿವೃದ್ದಿ, ಸ್ವಚ್ಛತೆ, ಪರಿಸರ ನಿರ್ವಹಣೆ ಸಹಿತ ಹಲವು ವಿಷಯಗಳಲ್ಲಿ ಅವ್ಯವಸ್ಥೆ ಕಂಡು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಚಾಟಿ ಬೀಸುತ್ತಿದ್ದಾರೆ. ಇದರಿಂದ ಹಲವು ಭಾಗಗಳಲ್ಲಿ ಕೆಲಸಗಳಿಗೆ ಚುರುಕುತನ ಬಂದಿದೆ. ಕೆರೆ ವಾತಾವರಣವನ್ನು ಸ್ವಚ್ಛವಾಗಿಡುವ, ಕಸವನ್ನು ಸರಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ ಕೆಲಸಗಳೇನು ಆಗುತ್ತಿವೆ. ಕೆಲವೊಂದು ಕಡೆಗಳಲ್ಲಿ ಉಪಲೋಕಾಯುಕ್ತರ ಭಯದಿಂದ ಸ್ವಚ್ಛ ಮಾಡುವ ಭರದಲ್ಲಿ ಅವ್ಯವಸ್ಥೆ ಮಾಡುವ ಪ್ರಯತ್ನಗಳೂ ನಡೆದಿವೆ. ಕರ್ನಾಟಕದ ಸಾಂಸ್ಕೃತಿಕ ನಗರಿ, ವಿದ್ಯಾಕಾಶಿ ಧಾರವಾಡದಲ್ಲೂ ಹಾಗೆಯೇ ಆಗಿದೆ. ಕೆರೆ ಸ್ವಚ್ಛತೆ ನೆಪದಲ್ಲಿ ಜೆಸಿಬಿ ನುಗ್ಗಿಸಿ ಟೊಂಗೆ ಸವರುವ ಮೂಲಕ ಪರಿಸರವನ್ನೇ ಹಾಳುವ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.

ಈ ಕುರಿತು ಧಾರವಾಡದ ಸಾಮಾಜಿಕ ಹೋರಾಟಗಾರರು, ಪರಿಸರವಾದಿಗಳೂ ಆಗಿರುವ ಹರ್ಷವರ್ಧನ್‌ ಶೀಲವಂತ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಾಕ...