ಭಾರತ, ಮೇ 25 -- ವಾರ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಮೇ 25ರ ಭಾನುವಾರದಿಂದ 31ರ ಶನಿವಾರದವರಿಗೆ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರ ವಾರ ಭವಿಷ್ಯ ಇಲ್ಲಿದೆ.

ಮಾನಸಿಕ ಒತ್ತಡದಿಂದ ಆರೋಗ್ಯದ ತೊಂದರೆ ಇರುತ್ತದೆ. ಒಳ್ಳೆಯ ಅಭ್ಯಾಸದಿಂದ ಮಾತ್ರ ಉತ್ತಮ ಆರೋಗ್ಯ ಗಳಿಸಲು ಸಾಧ್ಯ. ಮನಸಿನ ಯೋಚನೆಗಳನ್ನು ಕಾರ್ಯರೂಪಕ್ಕೆ ತರುವಿರಿ. ದಿನನಿತ್ಯದ ಜೀವನದಲ್ಲಿನ ಬದಲಾವಣೆಗೆ ಹೊಂದಿಕೊಳ್ಳಲಿದ್ದೀರಿ. ಕೇವಲ ಉತ್ತಮ ಪ್ರಯತ್ನದಿಂದ ಹೆಚ್ಚಿನ ವರಮಾನ ಗಳಿಸಲಿದ್ದೀರಿ. ಐಷಾರಾಮಿ ವಾಹನವನ್ನು ಕೊಳ್ಳುವ ಸಾಧ್ಯತೆಗಳಿವೆ. ಮಕ್ಕಳ ಆಸೆ ಆಕಾಂಕ್ಷೆಗಳನ್ನು ಪೂರೈಸಲು ಪ್ರಯತ್ನಿಸುವಿರಿ. ಹಿರಿಯರ ಸಮ್ಮುಖದಲ್ಲಿ ನಿ...