Bangalore, ಏಪ್ರಿಲ್ 18 -- ಮೈಸೂರು ಜಿಲ್ಲೆಯ ಹುಣಸೂರು ಹಾಗೂ ಕೃಷ್ಣರಾಜನಗರ ತಾಲ್ಲೂಕಿನ ಗಡಿ ಭಾಗದಲ್ಲಿರುವ ಊರು ಮಾಚಬಾಯನಹಳ್ಳಿ. ಅಲ್ಲಿರುವ ಸರ್ಕಾರಿ ಶಾಲೆ ಹಳೆಯದ್ದಾಗಿತ್ತು. ಸೌಲಭ್ಯಗಳು ಇದ್ದರೂ ಹೆಚ್ಚಿನ ಪ್ರಮಾಣದಲ್ಲಿ ಇರಲಿಲ್ಲ. ಮಕ್ಕಳಿಗೆ ಸೌಲಭ್ಯ ಸಿಕ್ಕರೆ ಖಂಡಿತ ಅವರ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎನ್ನುವ ಕುರಿತು ಚರ್ಚೆ ನಡೆದಿತ್ತು. ಹಾಗೆಂದು ನೆರವು ನೀಡುವವರು ಯಾರು?. ಇದೇ ಶಾಲೆಯಲ್ಲಿ ದಶಕಗಳ ಹಿಂದೆ ಓದಿದ್ದ ಹಳೆಯ ವಿದ್ಯಾರ್ಥಿಗೂ ಶಾಲೆಯ ಬೇಡಿಕೆಗಳ ಅರಿವಿತ್ತು. ಇದಕ್ಕೆ ತಾನು ಕೆಲಸ ಮಾಡಿದ ಸಂಸ್ಥೆಯೊಂದರಲ್ಲಿ ಇದ್ದ ಅವಕಾಶವೊಂದನ್ನು ಬಳಸಿಕೊಂಡು ಸೌಲಭ್ಯವನ್ನು ಒದಗಿಸಿಯೇ ಬಿಟ್ಟರು. ಎಲ್ಲವನ್ನೂ ಸರ್ಕಾರವೇ ಮಾಡಬೇಕು ಎನ್ನುವ ಬದಲು ತಾನು ಓದಿದ ಶಾಲೆಗೆ ಹಳೆ ವಿದ್ಯಾರ್ಥಿಗಳು ನೆರವಾಗುತ್ತಿದ್ದಕ್ಕಿಂತ ಖುಷಿ ವಿಚಾರ ಏನಿದೆ. ಇದರ ಹಿಂದೆ ಇದ್ದುದು ಹಳೆಯ ವಿದ್ಯಾರ್ಥಿ ಕಂಪೆನೆಯಲ್ಲಿ ಉನ್ನತ ಹುದ್ದೆ ಪಡೆಯಲು ಶಿಕ್ಷಣ ನೀಡಿದ ಶಾಲೆ. ಆ ಕಂಪೆನಿ ತನ್ನೆಲ್ಲ ನೌಕರರಿಗೂ ನಿಮ್ಮೂರಿನ ಸರ್ಕಾರಿ ಶಾಲೆ ಅಭ...