ಭಾರತ, ಫೆಬ್ರವರಿ 17 -- ಆಸ್ಟ್ರೇಲಿಯನ್ ಓಪನ್​ ಚಾಂಪಿಯನ್ ಹಾಗೂ ಇಟಲಿಯ ಟೆನಿಸ್ ಆಟಗಾರ ಯಾನಿಕ್ ಸಿನ್ನರ್ (Jannik Sinner doping ban) ಅವರನ್ನು ಮೂರು ತಿಂಗಳ ಕಾಲ ನಿಷೇಧ ಮಾಡಲಾಗಿದೆ. ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಅವರು ಈ ಶಿಕ್ಷೆಗೆ ಗುರಿಯಾಗಿದ್ದಾರೆ. ವಿಶ್ವ ಉದ್ದೀಪನ ಮದ್ದು ಸೇವನೆ ತಡೆ ಏಜನ್ಸಿ (WADA) ಜತೆಗೆ ಒಪ್ಪಂದ ಮಾಡಿರುವ ಯಾನಿಕ್ ಸಿನ್ನರ್​, ತಮ್ಮ ಹೊಣೆ ಹೊತ್ತು ಪ್ರಕರಣವನ್ನು ಬಗೆಹರಿಸಿಕೊಂಡಿದ್ದಾರೆ. ಶಿಕ್ಷೆಯ ಅವಧಿ ಫೆಬ್ರವರಿ 9ರಿಂದ ಮೇ 4ರ ತನಕ. ಈ ಸಮಯದಲ್ಲಿ ಅವರು ಯಾವುದೇ ಟೆನಿಸ್ ಟೂರ್ನಿಯಲ್ಲಿ ಆಡುವಂತಿಲ್ಲ. ಈ ನಿರ್ಧಾರದ ವಿರುದ್ಧ ಕೊಕೊ ಗೌಫ್, ಅರಿನಾ ಸಬಲೆಂಕಾ ಮತ್ತು ಜೆಸ್ಸಿಕಾ ಪೆಗುಲಾ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಯಾನಿಕ್ ಸಿನ್ನರ್‌ಗೆ ನೀಡಲಾದ ಡೋಪಿಂಗ್ ಶಿಕ್ಷೆಯು ವಾಡಾ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 2024ರ ಮಾರ್ಚ್​ನಲ್ಲಿ ನಡೆದಿದ್ದ ಡೋಪಿಂಗ್ ಟೆಸ್ಟ್​ ವೇಳೆ ಸಿನ್ನರ್ ಉದ್ದೀಪನ ಮದ್ದು ಪಡೆದಿರುವುದು ದೃಢಪಟ್ಟಿತ್ತು. ಪರೀಕ್ಷ...