ಭಾರತ, ಜೂನ್ 26 -- ಬೆಂಗಳೂರು: ʻರೋಹಿತ್ ಪತ್ರಿಕೋದ್ಯಮʼ ಪ್ರಶಸ್ತಿಗೆ ಈ ಬಾರಿ ಉದಯವಾಣಿಯ ಬೆಂಗಳೂರಿನ ವರದಿಗಾರ ವಿಜಯಕುಮಾರ್ ಚಂದರಗಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಐದು ಸಾವಿರ ರೂಪಾಯಿ ನಗದು, ಫಲಕವನ್ನು ಒಳಗೊಂಡಿದೆ.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಜುಲೈ 5 ರಂದು ಶನಿವಾರ ಬೆಳಗ್ಗೆ 10.30 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡುವರು. ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಶೇಷಾದ್ರಿಪುರಂ ಕಾಲೇಜಿನಲ್ಲಿ ಸಮಾರಂಭ ನಡೆಯಲಿದೆ.

ವಿಜಯಕುಮಾರ ಚಂದರಗಿ ಮೂಲತಃ ಧಾರವಾಡ ಜಿಲ್ಲೆಯವರು. ಉತ್ಸಾಹಿ ಪತ್ರಕರ್ತ. ಶಿವಮೊಗ್ಗ ಸೇರಿದಂತೆ ಹಲವು ಕಡೆ ಕೆಲಸ ಮಾಡಿ ಈಗ ಬೆಂಗಳೂರಿನಲ್ಲಿ ಉದಯವಾಣಿಯಲ್ಲಿ ವರದಿಗಾರರಾಗಿ ಉತ್ತಮ ವರದಿಗಳನ್ನು ಬರೆದು ಗಮನ ಸೆಳೆದಿದ್ದಾರೆ.

ರೋಹಿತ್ ಮೂಲತಃ ತುಮಕೂರು ಜಿಲ್ಲೆ ಗ್ರಾಮೀಣ ಪ್ರದೇಶದಿಂದ ಬಂದ ಅತ್ಯಂತ ಪ್ರತಿಭಾವಂತ ಯುವ ಪತ್ರಕರ್ತ. ಚಿಕ್ಕವಯಸ್ಸಿನಲ್ಲೇ ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ಹಲವು ಆಂಗ್ಲ ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ದುರ್ದೈವದಿಂದ ಅವರ ತ...