ಭಾರತ, ಏಪ್ರಿಲ್ 18 -- ಬಾಲಿವುಡ್ ನಟಿ ಊರ್ವಶಿ ರೌಟೆಲ್ ಆಗಾಗ ಸುದ್ದಿಯಲ್ಲಿರುತ್ತಾರೆ. ಡಾಕು ಮಹಾರಾಜ್ ಚಿತ್ರದ ನಟಿ ಇತ್ತೀಚಿಗೆ ನೀಡಿರುವ ಹೇಳಿಕೆಯೊಂದು ಭಾರಿ ಸಂಚಲನ ಸೃಷ್ಟಿಸಿದೆ. ಆಕೆಯ ಮಾತುಗಳು ಈಗ ಟ್ರೋಲರ್‌ಗಳ ಬಾಯಿಗೂ ಆಹಾರವಾಗಿದೆ. ಉತ್ತರಭಾರತದಲ್ಲಿ ತನ್ನ ಹೆಸರಿನಲ್ಲಿ ಒಂದು ದೇವಾಲಯವಿದೆ, ದಕ್ಷಿಣ ಭಾರತದಲ್ಲೂ ಇಂತಹ ಒಂದು ದೇವಾಲಯವಾಗಬೇಕು ಎಂದು ಊರ್ವಶಿ ಆಗ್ರಹಿಸಿದ್ದಾರೆ. ಇವರ ಹೇಳಿಕೆ ವೈರಲ್ ಆಗಿದ್ದು, ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂದರ್ಶನದ ವೇಳೆ ಊರ್ವಶಿ ಉತ್ತರಾಕಾಂಡದಲ್ಲಿ ಬದರಿನಾಥ ದೇವಸ್ಥಾನದ ಪಕ್ಕದಲ್ಲಿ ತನಗೆ ಒಂದು ದೇವಸ್ಥಾನವಿದೆ ಎಂದು ಹೇಳಿಕೊಂಡಿದ್ದಾರೆ. 'ಉತ್ತರಾಖಂಡದಲ್ಲಿ ನನ್ನ ಹೆಸರಿನಲ್ಲಿ ಒಂದು ದೇವಸ್ಥಾನವಿದೆ. ಬದರಿನಾಥಕ್ಕೆ ಭೇಟಿ ನೀಡಿದರೆ, ಅದರ ಪಕ್ಕದಲ್ಲಿಯೇ 'ಊರ್ವಶಿ ದೇವಸ್ಥಾನ' ಇದೆ' ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.

ಜನರು ಆಶೀರ್ವಾದ ಪಡೆಯಲು ಆ ದೇವಾಲಯಕ್ಕೆ ಹೋಗುತ್ತಾರಾ ಎಂದು ಸಂದರ್ಶಕರು ಕೇಳಿದ ಪ...