ಭಾರತ, ಮೇ 16 -- ನಮ್ಮ ದೇಶ ಭಾರತದ ಗಡಿ ಭದ್ರತೆ ವಿಚಾರ ಬಂದಾಗ ಯೋಧರು ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಕಾಯುತ್ತಾರೆ. ದೇಶದ ಎಲ್ಲ ರಾಜ್ಯಗಳ ಜನರೂ ನಮ್ಮ ಸೇನೆಯಲ್ಲಿದ್ದಾರೆ. ಆದಾಗ್ಯೂ ಕೆಲವು ಗ್ರಾಮದವರು ಬಹಳಷ್ಟು ಜನ ಈ ವಿಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ. ಅಂತಹ ಒಂದು ಗ್ರಾಮ ಉತ್ತರ ಪ್ರದೇಶದಲ್ಲಿದೆ. ಗ್ರಾಮದಲ್ಲಿದ್ದಾರೆ 15,000ಕ್ಕೂ ಹೆಚ್ಚು ಯೋಧರು. ಈ ಪೈಕಿ 200ಕ್ಕೂ ಹೆಚ್ಚು ಯೋಧರು ಜಮ್ಮು- ಕಾಶ್ಮೀರದಲ್ಲಿ ಗಡಿ ಕಾಯುತ್ತಿದ್ದಾರೆ. ಹೌದು ಇಂತಹ ಗ್ರಾಮದ ಕುರಿತು ಬಾಸ್ಕರ್ ಇಂಗ್ಲಿಷ್ ವರದಿ ಮಾಡಿದೆ.

ಉತ್ತರ ಪ್ರದೇಶದ ಘಾಜಿಫುರದ ಗಹ್ಮರ್ ಗ್ರಾಮವೇ ಈ ಯೋಧ ಗ್ರಾಮ. ಇಲ್ಲಿ 5000ಕ್ಕೂ ಹೆಚ್ಚು ನಿವೃತ್ತ ಯೋಧರಿದ್ದಾರೆ. ಅವರ ಕುಟುಂಬದ 10,000ಕ್ಕೂ ಹೆಚ್ಚು ಯುವಕರು ಸೇನೆಯ ಸೇವೆಯಲ್ಲಿದ್ದಾರೆ. 90 ಮನೆಗಳ 200ಕ್ಕೂ ಹೆಚ್ಚು ಯುವಕರು ಜಮ್ಮು- ಕಾಶ್ಮೀರದ ಗಡಿಕಾಯುವ ಕೆಲಸದಲ್ಲಿದ್ದಾರೆ. ರಾಷ್ಟ್ರಪ್ರೇಮಕ್ಕೆ ಹೆಸರುವಾಸಿಯಾದ ಗ್ರಾಮ ಇದು. 1965ರಿಂದ 1999ರ ಕಾರ್ಗಿಲ್ ಯುದ್ಧದ ತನಕ ಪ್ರಮುಖ ಯುದ್ಧಗಳಲ್ಲಿ ಈ ಗ್ರಾಮದ 50ಕ...