ಭಾರತ, ಫೆಬ್ರವರಿ 1 -- ಗೋಕರ್ಣ/ಕಾರವಾರ (ಉತ್ತರ ಕನ್ನಡ): ಶ್ರೀಕ್ಷೇತ್ರ ಗೋಕರ್ಣದ ಕೋಟಿತೀರ್ಥದ ನೈಋತ್ಯ ದಿಕ್ಕಿನಲ್ಲಿರುವ ಕಾಲಭೈರವ ದೇವರ ಅಷ್ಟಬಂಧ ಪ್ರತಿಷ್ಠೆಯ ಸುವರ್ಣ ಮಹೋತ್ಸವ ಫೆಬ್ರವರಿ 5 ರಿಂದ 7 ರವರೆಗೆ ವಿಜೃಂಭಣೆಯಿಂದ ಜರುಗಲಿದೆ. 3 ದಿನಗಳ ಕಾಲ ನಾರಾಯಣ ಗಣಪತಿ ಉಪ್ಪುಂದ ಹಾಗೂ ಮಹಾಬಲೇಶ್ವರ ಅವಧಾನಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.

ಮೊದಲ ದಿನದ ಕಾರ್ಯಕ್ರಮಗಳುಮೂರು ದಿನಗಳ ಕಾರ್ಯಕ್ರಮಗಳನ್ನು ವಿವರವಾಗಿ ನೋಡುವುದಾದರೆ ಫೆಬ್ರವರಿ 5 ರ ಬುಧವಾರ ಬೆಳಿಗ್ಗೆ ಗಣಪತಿ ಪೂಜೆ, ಧ್ವಜಾರೋಹಣ, ಶುದ್ದಿ ಪುಣ್ಯಾಹ, ಬ್ರಹ್ಮಕೂರ್ಚ ಹವನ, ಮಹಾಸಂಕಲ್ಪ, ಗಣಹವನ, ಪೂರ್ಣಾಹುತಿ ಜರುಗಲಿದೆ. ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಯಿಂದ ಅನ್ನಸಂತರ್ಪಣೆ ಇರುವುದು. ಅದೇ ದಿನ ಸಂಜೆ 4.30 ಗಂಟೆಯಿಂದ ವಾಸ್ತು-ರಾಕ್ಷೋಘ್ನ ಪಾರಾಯಣ, ರಾಕ್ಷೋಘ್ನ ಹವನ, ವಾಸ್ತು ಹವನ, ಕಲಶ ಸ್ಥಾಪನೆ, ಶತರುದ್ರ ಇತ್ಯಾದಿ ಜರುಗಲಿದೆ. ರಾತ್ರಿ 8 ಗಂಟೆಗೆ ಮ...