ಭಾರತ, ಫೆಬ್ರವರಿ 18 -- ಅಮೆರಿಕ ವಿಮಾನ ದುರಂತ ಮಾಸುವ ಮುನ್ನವೇ, ಪಕ್ಕದ ಕೆನಡಾದಲ್ಲಿ ಮತ್ತೊಂದು ವೈಮಾನಿಕ ಅಪಘಾತ ಸಂಭವಿಸಿದೆ. ಟೊರೊಂಟೊ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ (ಫೆ.18) ಸಂಭವಿಸಿದ ವಿಮಾನ ಅಪಘಾತದಲ್ಲಿ ಹಲವರಿಗೆ ಗಾಯಗಳಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಪಘಾತದಿಂದ ಮಗು ಸೇರಿದಂತೆ 18 ಜನರು ಗಾಯಗೊಂಡಿದ್ದಾರೆ ಎಂದು ಪೀಲ್ ಪ್ರಾದೇಶಿಕ ಅರೆವೈದ್ಯಕೀಯ ಸೇವೆಗಳು (Peel Regional Paramedic Services.) ತಿಳಿಸಿವೆ. ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಲ್ಯಾಂಡಿಂಗ್ ವೇಳೆ ವಿಮಾನ ಪಲ್ಟಿಯಾಗಿದೆ ಎಂದು ಸಿಬಿಸಿ ಟೆಲಿವಿಷನ್ ವರದಿ ಮಾಡಿದೆ. ಮಿನ್ನಿಯಾಪೊಲಿಸ್‌ನಿಂದ ಆಗಮಿಸಿದ ಡೆಲ್ಟಾ ಏರ್‌ಲೈನ್ಸ್ ವಿಮಾನಕ್ಕೆ ಸಂಬಂಧಿಸಿದ ಘಟನೆ ಬಗ್ಗೆ ಮಾಹಿತಿ ಇದೆ ಎಂದು ವಿಮಾನ ನಿಲ್ದಾಣವು ಎಕ್ಸ್ ಪೋಸ್ಟ್‌ನಲ್ಲಿ ದೃಢಪಡಿಸಿದೆ. "ತುರ್ತು ರಕ್ಷಣಾ ತಂಡಗಳು ಸ್ಪಂದಿಸುತ್ತಿವೆ. ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಗಮನ ಹರಿಸಲಾಗುತ್ತಿದೆ" ಎಂದು ...