Uttarakhand, ಫೆಬ್ರವರಿ 28 -- ಡೆಹ್ರಾಡೂನ್‌: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಕನಿಷ್ಠ 41 ಗಡಿ ರಸ್ತೆ ಸಂಸ್ಥೆ (ಬಿಆರ್‌ಒ) ಕಾರ್ಮಿಕರು ಹಿಮಪಾತದ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಬದರಿನಾಥ ದೇವಾಲಯದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಗಡಿ ಗ್ರಾಮವಾದ ಮಾನಾ ಬಳಿ ಈ ಘಟನೆ ನಡೆದಿದೆ. ಒಟ್ಟು 57 ಕಾರ್ಮಿಕರಿದ್ದು, ಅವರಲ್ಲಿ 16 ಜನರನ್ನು ಇಲ್ಲಿಯವರೆಗೆ ರಕ್ಷಿಸಿ ಮಾನಾ ಗ್ರಾಮದ ಬಳಿಯ ಸೇನಾ ಶಿಬಿರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Published by HT Digital Content Services with permission from HT Kannada....