ಭಾರತ, ಜೂನ್ 11 -- ವೆಂಕಟಾದ್ರಿ ಬೆಟ್ಟ ತಿರುಪತಿಯಲ್ಲಿರುವ ಬೆಟ್ಟವಾಗಿದೆ. ಕಲಿಯುಗದಲ್ಲಿ ಈ ಬೆಟ್ಟವನ್ನು ವೆಂಕಟಾದ್ರಿ ಮತ್ತು ವೆಂಕಟಾಚಲ ಎಂಬ ಹೆಸರಿಂದ ಕರೆಯಲಾಗುತ್ತದೆ. ಈ ಬೆಟ್ಟದ ಬಗ್ಗೆ ಸಂಪೂರ್ಣ ವಿವರಣೆ ನಮಗೆ ಬ್ರಂಹಾಂಡ ಪುರಾಣದಲ್ಲಿ ದೊರೆಯುತ್ತದೆ. ತಿರುಪತಿಯಲ್ಲಿ ಪುಣ್ಯಸ್ನಾನ ಮಾಡಲು ಸ್ನಾನದ ಘಟ್ಟಗಳಿವೆ. ಇಲ್ಲಿ ಪುಣ್ಯಸ್ನಾನವನ್ನು ಮಾಡಿದಲ್ಲಿ ಯಾವುದೇ ವ್ಯಕ್ತಿಯು ತನಗೆ ತಿಳಿದೊ ತಿಳಿದೆಯೋ ಮಾಡಿದ ಪಾಪಕೃತ್ಯಗಳು ನಶಿಸಿಹೋಗುತ್ತವೆ. ತಿನ್ನುವ ಆಹಾರವನ್ನು ಅವಮಾನಿಸುವ ಕಾರಣ ಅನೇಕರು ವಯಸ್ಸು ಹೆಚ್ಚುತ್ತಿದ್ದಂತೆ ಆಹಾರ ಸೇವಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಇನ್ನೂ ಕೆಲವರಿಗೆ ಸೇವಿಸುವ ಆಹಾರವು ಜೀರ್ಣವಾಗುವುದೇ ಇಲ್ಲ. ಇಂಥವರು ತಿರುಪತಿಯಲ್ಲಿ ಪೂಜೆಯನ್ನು ಸಲ್ಲಿಸಿದಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಕುಟುಂಬದಲ್ಲಿ ಮಕ್ಕಳ ಕಾರಣದಿಂದ ಆತಂಕದ ಪರಿಸ್ಥಿತಿಯು ಉಂಟಾಗುತ್ತದೆ. ಆದರೆ ಕುಟುಂಬ ಸಮೇತರಾಗಿ ವೆಂಕಟಾದ್ರಿ ಬೆಟ್ಟವನ್ನು ತಲುಪಿ, ಪುಣ್ಯಸ್ನಾನದ ನಂತರ ಭಗವಂತನನ್ನು ದರ್ಶಿಸಿದಲ್ಲಿ ಕುಟು...