Udupi, ಮಾರ್ಚ್ 4 -- ಉಡುಪಿ: ಉಡುಪಿ ಜಿಲ್ಲೆಯ ಪ್ರಸಿದ್ಧ ಕಾರಣಿಕ ಕ್ಷೇತ್ರ ಶ್ರೀಹೊಸ ಮಾರಿಯಮ್ಮ (ಮಾರಿಗುಡಿ) ದೇವಾಲಯವೀಗ ಸುದ್ದಿಯಲ್ಲಿದೆ. ರಾಜಕಾರಣಿಗಳು, ಕ್ರಿಕೆಟ್ ಪಟುಗಳು, ಚಿತ್ರನಟರು, ಸಾಧು, ಸಂತರ ಸಹಿತ ಸಾವಿರಾರು ಮಂದಿ ಪ್ರತಿನಿತ್ಯ ಆಗಮಿಸುತ್ತಿದ್ದಾರೆ. ಇಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯುತ್ತಿರುವುದು ಇದಕ್ಕೆ ಕಾರಣ, ಕಡಲತೀರದ ಪಟ್ಟಣ ಕಾಪು ಮಾರಿಯಮ್ಮನ ಕುರಿತು ಹಲವು ಮಂದಿ ಕತೆಗಳನ್ನು ಹೇಳುತ್ತಾರೆ. ಇತಿಹಾಸ ಇದೇ ಎಂಬುದನ್ನು ತಿಳಿಸುತ್ತಾರೆ. ಪ್ರಮುಖವಾದದ್ದೊಂದು ಕೆಳದಿ ರಾಜವಂಶಕ್ಕೂ ಕಾಪುವಿಗೂ ಇರುವ ನಂಟು. ಕರಾವಳಿ ಪ್ರದೇಶವನ್ನು ತುಳುನಾಡು ಎನ್ನುತ್ತಾರೆ. ತುಳುನಾಡನ್ನು ಕೆಳದಿ ಸಂಸ್ಥಾನದ ದೊರೆಗಳು ಆಳುತ್ತಿದ್ದರು. ಈ ಸಂದರ್ಭ ಕಾಪುವಿನಲ್ಲಿ ಅವರು ನೆಲೆಸಿದ್ದರು. ವಿಜನಗರ ಸಾಮ್ರಾಜ್ಯದ ಭಾಗವಾಗಿದ್ದ ಕೆಳದಿ ಸಂಸ್ಥಾನದವರು ಸುಮಾರು 17ನೇ ಶತಮಾನದಲ್ಲಿ ಕಾಪುವಿನ ಮೇಲೆ ಹಿಡಿತ ಸಾಧಿಸಿದ್ದರು.

ಈಗ ನೀವು ನೋಡುವ ಕಾಪು ದೀಪಸ್ತಂಭದ ಬಳಿ ಮನೋಹರ ಗಧಾ ಎಂಬ ಕೋಟೆಯನ್ನು ಆ ಸಂದರ್ಭ ಕೆಳದಿ ದೊರೆ ಬಸಪ್ಪ...