ಭಾರತ, ಮಾರ್ಚ್ 5 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 4ರ ಸಂಚಿಕೆಯಲ್ಲಿ ಮಿನಿಸ್ಟರ್ ವೀರೇಂದ್ರನನ್ನು ಸಾಯಿಸಲು ಸ್ಕೆಚ್ ಹಾಕಿದ್ದಾರೆ ವಿಜಯಾಂಬಿಕಾ ಮತ್ತು ಮದನ್‌. ಅದಕ್ಕಾಗಿ ಉಪಾಯವಾಗಿ ಗ್ಲಾಸ್ ಬೀಳಿಸಿ ವಂದನಾಳ ಗಮನವನ್ನು ಬೇರೆಡೆಗೆ ಸೆಳೆದು ಹಾಲಿಗೆ ವಿಷ ಬೆರೆಸಿದ್ದಾಳೆ ವಿಜಯಾಂಬಿಕಾ. ಇತ್ತ ಮದನ್ ಖಾಲಿ ಪೇಪರ್‌ಗೆ ಸಹಿ ಹಾಕಿಸಿಕೊಳ್ಳಲು ಮಾವನ ಸಹಿ ಮಾಡುತ್ತಿರುವ ಇತರ ಪೇಪರ್ ಜೊತೆ ಖಾಲಿ ಪೇಪರ್ ಕೂಡ ಇಟ್ಟಿದ್ದಾನೆ. ವೀರು ಬೇರೆಲ್ಲಾ ಪೇಪರ್ ಜೊತೆ ಖಾಲಿ ಪೇಪರ್‌ಗೂ ಕೂಡ ಸಹಿ ಮಾಡುತ್ತಾನೆ. ಇದನ್ನು ನೋಡಿ ವಿಜಯಾಂಬಿಕಾ ಹಾಗೂ ಮದನ್ ತಾವು ಗೆದ್ದು ಬಿಟ್ವಿ ಎಂದು ಸಂಭ್ರಮಿಸುತ್ತಾರೆ. ಅಲ್ಲದೇ ವೀರು ಹಾಲು ಕುಡಿದ ಮೇಲೆ ಅವನು ಸಾಯುತ್ತಾನೆ, ಆಗ ಅವನ ನರಳಾಟ ನೋಡಿ ನಾವು ಬರಬೇಕು ಎಂದುಕೊಂಡು ಒಳಗಡೆ ಹೋಗುತ್ತಾರೆ. ಆದರೆ ಅವರು ಊಹಿಸಿದ ಟ್ವಿಸ್ಟ್ ಮುಂದೆ ಇರುತ್ತದೆ.

ವರದ ಹಾಗೂ ವರಲಕ್ಷ್ಮೀ ಹನಿಮೂನ್‌ಗೆ ಹೋಗುವ ಪ್ಲಾನ್ ಮಾಡಿ ಇರುತ್ತಾರೆ. ಅವರು ತಮ್ಮ ಜೊತೆ ಶ್ರಾವಣಿ ಹಾಗೂ ಸುಬ್ರಹ್ಮಣ್ಯನನ್ನೂ ಕರೆದುಕೊಂಡು ಹೋಗಬೇ...