ಭಾರತ, ಫೆಬ್ರವರಿ 13 -- ಮಂಗಳೂರು: ಭತ್ತದ ಬೆಳೆ ಕ್ಷೀಣಿಸುತ್ತಿರುವ ಇಂದಿನ ದಶಕಗಳಲ್ಲಿ ಭತ್ತ ನಾಟಿ ಕಾರ್ಯಕ್ರಮವೊಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗೌರವಕ್ಕೆ ಪಾತ್ರವಾಗಿದೆ. ವಾಣಿಜ್ಯ ಬೆಳೆಗಳ ಧಾವಂತದಲ್ಲಿ ಭತ್ತದ ಗದ್ದೆಗಳು ನಶಿಸಿ ಹೋಗುತ್ತಿವೆ.ಕೇವಲ ಬೆರಳೆಣಿಕೆಯ ಮಂದಿ ಮಾತ್ರ ಇಂದು ಭತ್ತದ ಬೆಳೆ ಬೆಳೆಯುತ್ತಿದ್ದಾರೆ. ಭತ್ತದ ಬೆಳೆಯ ಅರಿವು, ಮಾಹಿತಿ ಮುಂದಿನ ಪೀಳಿಗೆಗೆ ಮೂಡಬೇಕಾಗಿರುವುದು ಪ್ರಾಮುಖ್ಯವಾಗಿದೆ. ನಾವು ಉಣ್ಣುವ ಅನ್ನದ ಮೂಲ,ಆ ಬೆಳೆಯ ಮಹತ್ವ ತಿಳಿಯಬೇಕಾದ್ದು ಅಗತ್ಯವಾಗಿದೆ. ಹಿಂದೆ ಮೂರು ಬೆಳೆ ಬೆಳೆಯುತ್ತಿದ್ದ ಗದ್ದೆಗಳು ಇಂದು ಒಂದು ಬೆಳೆಗೆ ಸೀಮಿತವಾಗಿ,ಗದ್ದೆ ಇರುವವರು ಅಕ್ಕಿಯನ್ನು ಅಂಗಡಿಗಳಿಂದ ಖರೀದಿಸುವ ಸ್ಥಿತಿ ಇದೆ.

ಗದ್ದೆ, ಭತ್ತ, ಅಕ್ಕಿ ಇದರ ಮಹತ್ವವನ್ನು ಯುವ ಜನತೆಗೆ ತಿಳಿಸಿ ಅವರನ್ನು ಅದರಲ್ಲಿ ತೊಡಗಿಸಿಕೊಂಡು 2024ರ ಅ.20ರಂದು ಬೆಳಾಲು ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಗದ್ದೆಯಲ್ಲಿ ಉಜಿರೆಯ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ಎಸ್ ಡಿಎಂ ಕಾ...