ಭಾರತ, ಫೆಬ್ರವರಿ 6 -- PMGKAY: ಆದಾಯ ತೆರಿಗೆ ಪಾವತಿಸುತ್ತಿದ್ದರೂ ಉಚಿತವಾಗಿ ಪಡಿತರ ಪಡೆಯುತ್ತಿದ್ದೀರಾ, ವಿಶೇಷವಾಗಿ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY)ಯ ಫಲಾನುಭವಿಗಳೇ? ಹಾಗಾದರೆ ಈ ಸುದ್ದಿಯನ್ನೊಮ್ಮೆ ಗಮನಿಸಿ. ಭಾರತದಲ್ಲಿ ಕೋವಿಡ್ ಸಂಕಷ್ಟ ಉಂಟಾದ ಸಂದರ್ಭದಲ್ಲಿ ಬಡವರು ಮತ್ತು ನಿರ್ಗತಿಕರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY)ಯನ್ನು ಪರಿಚಯಿಸಿತು. ಈ ಯೋಜನೆಯ ಫಲಾನುಭವಿಗಳ ಪೈಕಿ ಅನರ್ಹರೂ ಇರುವುದನ್ನು ಭಾರತ ಸರ್ಕಾರ ಗಮನಿಸಿದೆ. ಹೀಗಾಗಿ, ಕೇಂದ್ರ ಆಹಾರ ಸಚಿವಾಲಯವು ಆದಾಯ ತೆರಿಗೆ ಇಲಾಖೆಯ ನೆರವು ಪಡೆದುಕೊಂಡಿದ್ದು, ಆದಾಯ ತೆರಿಗೆ ದತ್ತಾಂಶ ಪರಿಶೀಲಿಸಲಾರಂಭಿಸಿದೆ.

ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಲ್ಲಿ ಆದಾಯ ತೆರಿಗೆ ಪಾವತಿಸದೇ ಇರುವ ಬಡ ಕುಟುಂಬಗಳಿಗೆ ಮಾತ್ರವೇ ಪಡಿತರ ನೀಡಲಾಗುತ್ತದೆ. ಕೇಂದ್ರ ಸರ್ಕಾರವು 2025-26 ಕೇಂದ್ರ ಬಜೆಟ್‌ನಲ್ಲಿ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಗೆ 2....