Bengaluru, ಏಪ್ರಿಲ್ 26 -- ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ಧಾಮದಲ್ಲಿ ಏಪ್ರಿಲ್‌ 22ರಂದು ನಡೆದ ಭಯಾನಕ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 26 ಜನರು ಮೃತಪಟ್ಟಿದ್ದಾರೆ. ಇಡೀ ದೇಶವೇ ಉಗ್ರರ ಈ ಹೇಯ ಕೃತ್ಯವನ್ನು ಖಂಡಿಸಿದೆ. ಈ ನೋವಿನ ಬೆನ್ನಲ್ಲೇ ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಬೆಂಗಳೂರಿನಲ್ಲಿ ನಡೆಯಲಿರುವ ತಮ್ಮ ಕಾನ್ಸರ್ಟ್‌ನ ಟಿಕೆಟ್ ಮಾರಾಟ ಬುಕಿಂಗ್‌ ದಿನವನ್ನು ಮುಂದೂಡಿ, ದುರ್ಘಟನೆಯಲ್ಲಿ ಮೃತಪಟ್ಟವರ ಮತ್ತು ಅವರ ಕುಟುಂಬಗಳಿಗೆ ಗೌರವ ಸಲ್ಲಿಸಿದ್ದಾರೆ.

ಜೂನ್ 1 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅವರ ಬಹುನೀಕ್ಷಿತ ಹುಕುಮ್ ವರ್ಲ್ಡ್ ಟೂರ್‌ನ ಎರಡನೇ ಪ್ರದರ್ಶನಕ್ಕೆ ಏಪ್ರಿಲ್ 24 ರಂದು ಟಿಕೆಟ್ ಬುಕಿಂಗ್ ಆರಂಭವಾಗಬೇಕಿತ್ತು. ಆದಾಗ್ಯೂ, ದೇಶದಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಟಿಕೆಟ್‌ ಮಾರಾಟವನ್ನು ಮುಂದೂಡಲಾಗಿದೆ ಎಂದು ಆಯೋಜಕರು ಘೋಷಿಸಿದ್ದಾರೆ. ಟಿಕೆಟ್ ಬುಕಿಂಗ್‌ಗೆ ಪರಿಷ್ಕೃತ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದೂ ತಿಳಿಸಿದ್ದಾರೆ.

ಇದನ್...