ಭಾರತ, ಫೆಬ್ರವರಿ 26 -- ನೀವು ಎಷ್ಟು ದಿನ ಬದುಕುತ್ತೀರಿ ಅಥವಾ ನೀವು ಎಷ್ಟು ವರ್ಷ ಬದುಕಬಹುದು ಎಂಬ ಆಸಕ್ತಿದಾಯಕ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಒಂದಲ್ಲ ಒಂದು ಹಂತದಲ್ಲಿ ಉದ್ಭವಿಸಿರಬಹುದು. ಅನೇಕ ಜನರು ಯಾವಾಗಲೂ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಿರುತ್ತಾರೆ. ಇನ್ನೂ ಕೆಲವರು ಹೊಸ ಮಾರ್ಗಗಳನ್ನು ಸಹ ಕಂಡುಹಿಡಿದಿದ್ದಾರೆ. ಧರ್ಮದಿಂದ ಜ್ಯೋತಿಷ್ಯದವರೆಗೆ; ಜೀವಿತಾವಧಿಯನ್ನು ಊಹಿಸಲು ಹೇಳಿಕೊಳ್ಳುವ ಅನೇಕ ವಿಷಯಗಳಿವೆ. ಆದರೆ ನೀವು ಎಷ್ಟು ಕಾಲ ಬದುಕುತ್ತೀರಿ ಎಂದು ನಿಮ್ಮ ಉಗುರುಗಳು ಹೇಳಬಲ್ಲವು ಎಂಬುದು ನಿಮಗೆ ತಿಳಿದಿದೆಯೇ?

ಅಚ್ಚರಿ ಎನಿಸಿದರೂ ಇದು ಸತ್ಯ. ನಿಮಗೆ ನಂಬಲು ಕಷ್ಟವಾಗಬಹುದು. ಇತ್ತೀಚೆಗೆ ಸಂಶೋಧನೆ ನಡೆಸಿದ ಹಾರ್ವರ್ಡ್ ವೈದ್ಯಕೀಯ ಶಾಲೆಯ ಡಾ. ಡೇವಿಡ್ ಸಿಂಕ್ಲೇರ್, ಉಗುರುಗಳ ಮೂಲಕ ನೀವು ಎಷ್ಟು ವರ್ಷ ಬದುಕಬಲ್ಲಿರಿ ಎಂಬುದನ್ನು ಅಂದಾಜು ಮಾಡಬಹುದು ಎಂದು ದೃಢಪಡಿಸಿದ್ದಾರೆ. ಈ ಬಗ್ಗೆ ಅವರು ಏನು ಹೇಳಿದ್ದಾರೆ, ಇಲ್ಲಿದೆ ವಿವರ.

ಜೆನೆಟಿಕ್ಸ್ ತಜ್ಞ ಡಾ.ಡೇವಿಡ್ ಸಿಂಕ್ಲೇರ್ ಅವರ ಪ್ರಕಾರ, ನಿಮ್ಮ...