ಭಾರತ, ಮಾರ್ಚ್ 2 -- ತರಕಾರಿ ಸೇವನೆ ಆರೋಗ್ಯಕ್ಕೆ ಬಹಳ ಉತ್ತಮ. ಕೆಲವು ತರಕಾರಿಗಳನ್ನು ಹಸಿಯಾಗಿ ತಿಂದರೆ ಹೆಚ್ಚು ಪ್ರಯೋಜನ ಎನ್ನುತ್ತಾರೆ. ಆದರೆ ಕೆಲವು ತರಕಾರಿಗಳನ್ನು ಹಸಿಯಾಗಿ ತಿಂದರೆ ಆರೋಗ್ಯಕ್ಕೆ ಹಾನಿ ತಪ್ಪಿದ್ದಲ್ಲ. ಸಲಾಡ್‌ ರೂಪದಲ್ಲಿ ಹಸಿ ತರಕಾರಿ ತಿನ್ನುವ ಅಭ್ಯಾಸವಿದ್ದರೆ ಈ ತರಕಾರಿಗಳನ್ನು ಎಂದಿಗೂ ಸೇವಿಸಬಾರದು. ಇದರಿಂದ ಆರೋಗ್ಯಕ್ಕೆ ಪ್ರಯೋಜನ ಸಿಗುವ ಬದಲು ಹಾನಿಯಾಗುವ ಸಾಧ್ಯತೆಯೇ ಹೆಚ್ಚು. ಯಾವೆಲ್ಲಾ ತರಕಾರಿಗಳನ್ನು ಹಸಿಯಾಗಿ ತಿನ್ನಬಾರದು ಎಂಬ ವಿವರ ಇಲ್ಲಿದೆ.

ಬೀನ್ಸ್ಹಲವು ಬೀನ್ಸ್ ಅನ್ನು ಸಲಾಡ್‌ಗಳಲ್ಲಿ ಸೇರಿಸುವ ಮೂಲಕ ಹಸಿಯಾಗಿ ತಿನ್ನಲು ಇಷ್ಟಪಡುತ್ತಾರೆ, ಆದರೆ ಇದನ್ನು ಅಪ್ಪಿತಪ್ಪಿಯೂ ಹಸಿಯಾಗಿ ತಿನ್ನಬೇಡಿ. ಬೀನ್ಸ್‌ನಲ್ಲಿ ಲೆಕ್ಟಿನ್‌ಗಳಿದ್ದು ಅದು ಹೊಟ್ಟೆಯ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಇದನ್ನು ಬೇಯಿಸಿ ಅಥವಾ ಹುರಿದ ನಂತರವಷ್ಟೇ ತಿನ್ನಬೇಕು. ಇದನ್ನು ಬೇಯಿಸಿ ಸ್ವಲ್ಪ ಬೇಯಿಸಿ ಅಥವಾ ಬೆಣ್ಣೆಯಲ್ಲಿ ಹುರಿದು ನಂತರ ತಿನ್ನುವುದು ಉತ್ತಮ.

ಹೂಕೋಸುಬ್ರೊಕೊಲಿಯಂತೆ ಹೂಕೋಸನ್ನು ಹಸಿಯಾಗಿ ತ...