Bangalore, ಮೇ 23 -- ಮಧುಬಾಲಾ ಮತ್ತು ದಿಲೀಪ್ ಕುಮಾರ್ 1951ರಲ್ಲಿ ತರಾನಾ ಚಿತ್ರದ ಸೆಟ್‌ಗಳಲ್ಲಿ ಇಬ್ಬರೂ ಭೇಟಿಯಾದಾಗ ಪ್ರೀತಿಯ ಕಿಡಿ ಹೊತ್ತಿತ್ತು. ಆದರೆ ಮುಘಲ್-ಎ-ಅಜಮ್‌ನಲ್ಲಿ ಸಲೀಂ ಮತ್ತು ಅನಾರ್ಕಲಿಯ ಐಕಾನಿಕ್ ಪಾತ್ರಗಳನ್ನು ನಿರ್ವಹಿಸುವ ಸಮಯದಲ್ಲಿ ಇವರಿಬ್ಬರ ಸಂಬಂಧ ಹಳಸಿತ್ತು.

ಮುಘಲ್-ಎ-ಅಜಮ್‌ನ ನಿರ್ಮಾಪಕ ಮತ್ತು ನಿರ್ದೇಶಕ ಕೆ ಆಸಿಫ್ ಕೂಡ ಮಧುಬಾಲಾ ಮತ್ತು ದಿಲೀಪ್ ಕುಮಾರ್ ಅವರ ಪ್ರೇಮ ಸಂಬಂಧದ ಕುರಿತು ಆಸಕ್ತಿ ಹೊಂದಿದ್ದರು. ಎಷ್ಟೆಂದರೆ ಇವರಿಬ್ಬರ ಸಂಬಂಧದ ವಿಷಯದಲ್ಲಿ ಮಧ್ಯಪ್ರವೇಶವನ್ನೂ ಮಾಡಿದ್ದರು ಎಂದು ವರದಿಗಳು ತಿಳಿಸಿವೆ.

ದಿಲೀಪ್‌ ಕುಮಾರ್‌ ನಿನ್ನನ್ನು ಬಿಟ್ಟು ಹೋಗದಂತೆ ಇರಬೇಕಾದರೆ ಏನು ಮಾಡಬೇಕು ಎಂದು ನಟಿ ಮಧುಬಾಲಾಗೆ ನಿರ್ದೇಶಕ ಕೆ ಆಸಿಫ್ ಸಲಹೆ ನೀಡಿದ್ದರಂತೆ.

ನಟ ದಿಲೀಪ್ ಕುಮಾರ್ ತಮ್ಮ ಆತ್ಮಚರಿತ್ರೆ ದಿಲೀಪ್ ಕುಮಾರ್: ದಿ ಸಬ್‌ಸ್ಟೆನ್ಸ್ ಅಂಡ್ ದಿ ಶ್ಯಾಡೋದಲ್ಲಿ ಮಧುಬಾಲಾ ಅವರೊಂದಿಗಿನ ತಮ್ಮ ಸಂಬಂಧದ ಬಗ್ಗೆ ಬರೆದಿದ್ದಾರೆ.

"ನಮ್ಮ ಸಂಬಂಧ ಇಷ್ಟು ದೂರ ಬರಲಿದೆ ಎಂದು ಗೊತ್ತಿರಲಿಲ್ಲ....