Bangalore, ಏಪ್ರಿಲ್ 22 -- ಬೆಂಗಳೂರು: ಕೆಲ ತಿಂಗಳಿನಿಂದ ಶಾಂತಿ ನೆಲೆಸಿದಂತೆ ಕಂಡ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿಯಾಗಿದೆ. ಈ ದಾಳಿಯಲ್ಲಿ ಕರ್ನಾಟಕದವರ ಸಹಿತ ಹಲವರು ಜೀವ ಕಳೆದುಕೊಂಡಿದ್ದಾರೆ. ಸ್ಮರಣೀಯ ಕ್ಷಣದೊಂದಿಗೆ ಹಿಂದಿರುಗಲು ಅಣಿಯಾಗಿದ್ದವರ ಮೇಲೂ ದಾಳಿಯಾಗಿದೆ. ರೆಸಾರ್ಟ್‌ಗೆ ನುಗ್ಗಿ ಗುಂಡಿನ ಮಳೆ ಸುರಿಗೈಯಲಾಗಿದೆ. ಅದರಲ್ಲೂ ಪುರುಷರನ್ನೇ ಗುರಿಯಾಗಿಸಿ ದಾಳಿ ಮಾಡಲಾಗಿದೆ. ಹಿಂದೂಗಳನ್ನೇ ಟಾರ್ಗೆಟ್‌ ಮಾಡಲಾಗಿದೆ. ದಾಳಿ ವೇಳೆ ಹತರಾದ ಪುರುಷರು ಜೀವ ಕಳೆದುಕೊಂಡಿದ್ದರೆ. ಅವರ ದೇಹದ ಬಳಿ ಅಸಹಾಯತೆಯಿಂದ ಕುಳಿತ ಮಹಿಳೆ ಸಹಾಯಕ್ಕೆ ಅಂಗಲಾಚುತ್ತಿರುವ ವಿಡಿಯೋ ಹಾಗೂ ಫೋಟೋವೊಂದು ಭಾರೀ ವೈರಲ್‌ ಆಗಿದೆ. ಇದಕ್ಕೆ ಕನ್ನಡಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ಹೊರ ಹಾಕಿದ್ದಾರೆ. ಭಯೋತ್ಪಾದಕರಿಗೆ ಧರ್ಮವಿಲ್ಲ. ನಮ್ಮಗಳ ಹೇಡಿತನಕ್ಕೆ ಮದ್ದಿಲ್ಲ. ನಾವು ಸೇಡು ತೀರಿಸಿಕೊಳ್ಳಲೇಬೇಕು ಎನ್ನುವ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ.

ಶೋಭಾರಾವ್‌ ಅವರ ಪ್ರತಿಕ್ರಿಯೆ ಹೀಗಿದೆ. ಉಗ್ರರ ದಾಳಿಯ ...