ಭಾರತ, ಏಪ್ರಿಲ್ 17 -- ಈ ವಾರ ತೆರೆ ಕಾಣುವ ಕನ್ನಡ ಸಿನಿಮಾಗಳು: ಈ ವಾರ ಯುದ್ಧಕಾಂಡ, ವೀರಚಂದ್ರಹಾಸ, ಕೋರ ಸೇರಿದಂತೆ ಆರು ಕನ್ನಡ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ. ಇವುಗಳಲ್ಲಿ ಯುದ್ಧಕಾಂಡ, ವೀರ ಚಂದ್ರಹಾಸ, ಕೋರ ಸಿನಿಮಾಗಳು ಹೆಚ್ಚಿನ ನಿರೀಕ್ಷೆ ಹುಟ್ಟುಹಾಕಿವೆ. ಜತೆಗೆ ಹೊಸಬರ ಮೂರು ಸಿನಿಮಾಗಳೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ.

ವೀರ ಚಂದ್ರಹಾಸ: ರವಿ ಬಸ್ರೂರು ನಿರ್ದೇಶನದ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಯಕ್ಷಗಾನ ಪ್ರಸಂಗ ಆಧರಿತ ಚಿತ್ರ. ಈ ಸಿನಿಮಾ ಏಪ್ರಿಲ್‌ 18ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಕೋರ: ಸುನಾಮಿ ಕಿಟ್ಟಿ ಅಭಿನಯದದ ಕೋರಾ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ಸಕಲೇಶಪುರ, ಶೃಂಗೇರಿ, ಉಡುಪಿ, ಮಂಗಳೂರು ಮುಂತಾದ ಕಡೆ ಈ ಸಿನಿಮಾದ ಶೂಟಿಂಗ್‌ ನಡೆದಿದೆ. ಬುಡಕಟ್ಟು ಜನಾಂಗ, ರಾಕ್ಷಸನೊಬ್ಬನ ಕಥೆಯನ್ನು ಈ ಸಿನಿಮಾ ಹೊಂದಿದೆಯಂತೆ.

ಯುದ್ಧಕಾಂಡ: ಅಜಯ್‌ ರಾವ್‌ ನಿರ್ಮಾಣ ಮತ್ತು ನಟನೆಯ ಯುದ್ಧ ಕಾಂಡ ಸಿನಿಮಾ ಈ ವಾರ ತೆರೆ ಕಾಣಲಿದೆ. ಮಗಳ ಮೇಲೆ ಅತ್ಯಾಚ...